ಬೆಂಗಳೂರು: ತಾಯ್ತನ ಎನ್ನುವುದು ಪ್ರತಿಯೊಬ್ಬ ಮಹಿಳೆಗೆ ಪರಿಪೂರ್ಣತೆ ಒದಗಿಸುತ್ತದೆ. ಆದರೆ ಬಂಜೆತನ ಎನ್ನುವುದು ಹೆಣ್ಣಿಗೆ ಶಾಪವಿದ್ದಂತೆ. ಮಕ್ಕಳಾಗದೇ ಇರುವುದಕ್ಕೆ ಕಾರಣಗಳು ಹಲವಿರಬಹುದು. ಆದರೆ ಅದರ ಲಕ್ಷಣಗಳು ಯಾವುವು ಗೊತ್ತಾ?
ಅನಿಯಂತ್ರಿತ ಮುಟ್ಟು
ಹೆಚ್ಚಿನ ಮಹಿಳೆಯರಿಗೆ ಅನಿಯಂತ್ರಿತ ಮುಟ್ಟಿನ ಸಮಸ್ಯೆಯಿರುತ್ತದೆ. ಹಾಗಂತ ಇದನ್ನು ಉದಾಸೀನ ಮಾಡಬೇಡಿ. ತಜ್ಞ ವೈದ್ಯರಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಿ.
ಸೆಕ್ಸ್ ನಲ್ಲಿ ನೋವು
ಸೆಕ್ಸ್ ಮಾಡುವಾಗ ವಿಪರೀತ ನೋವಾಗುತ್ತಿದ್ದರೆ ಅದಕ್ಕೆ ಗರ್ಭಕೋಶಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ಕಾರಣವಾಗಿರಬಹುದು. ಇದನ್ನೂ ನೆಗ್ಲೆಕ್ಟ್ ಮಾಡಬೇಡಿ. ವೈದ್ಯರಿಂದ ಚಿಕಿತ್ಸೆ ಪಡೆಯಿರಿ.
ಖಿನ್ನತೆ
ಖಿನ್ನತೆ, ಒತ್ತಡ, ಮುಂತಾದ ಮಾನಸಿಕ ಸಮಸ್ಯೆಗಳು ಬಂಜೆತನದ ಲಕ್ಷಣವಾಗಿರಬಹುದು. ಮುಟ್ಟಿನ ದಿನಗಳಲ್ಲಿ ಕೋಪ, ಒತ್ತಡ ಸಾಮಾನ್ಯ. ಆದರೆ ಇದು ಒಂದು ಹಂತ ಮೀರಿ ಇದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.
ಮುಖದಲ್ಲಿ ಕೂದಲು
ಟೆಸ್ಟಿರೋನ್ ಮಟ್ಟ ಹೆಚ್ಚಾದರೆ ಮುಖದಲ್ಲಿ ಕೂದಲು ಬೆಳೆಯುತ್ತದೆ. ಗಂಡಸರಂತೆ ಮೀಸೆ ಮೂಡುವುದು, ಅಸಹಜವಾಗಿ ಮುಖದಲ್ಲಿ ಕೂದಲು ಬೆಳೆದರೆ ನಿಮ್ಮ ಸೆಕ್ಸ್ ಹಾರ್ಮೋನ್ ನಲ್ಲಿ ಅಸಮತೋಲನವಿರುವುದನ್ನು ತೋರಿಸುತ್ತದೆ.
ತೂಕ ಹೆಚ್ಚುವುದು
ಇದ್ದಕ್ಕಿದ್ದಂತೆ ತೂಕ ಹೆಚ್ಚುವುದು ಬಂಜೆತನದ ಲಕ್ಷಣವಾಗಬಹುದು. ಸಾಕಷ್ಟು ಕಸರತ್ತು ನಡೆಸಿಯೂ ತೂಕ ಕಳೆದುಕೊಳ್ಳುತ್ತಿಲ್ಲವೆಂದರೆ ಅದರ ಬಗ್ಗೆ ಗಂಭೀರವಾಗಿ ಚಿಂತಿಸುವುದು ಒಳಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.