ಈ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ತುಪ್ಪವನ್ನು ಸೇವಿಸಬೇಡಿ

ಶುಕ್ರವಾರ, 2 ಆಗಸ್ಟ್ 2019 (09:30 IST)
ಬೆಂಗಳೂರು : ತುಪ್ಪ ಮನೆಮದ್ದುಗಳಲ್ಲಿ ಬಳಸುವ ಒಂದು ಆಹಾರ ಪದಾರ್ಥ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಂದಮಾತ್ರಕ್ಕೆ ಈ ಸಮಸ್ಯೆ ಇರುವವರು ಇದನ್ನು ಅತಿಯಾಗಿ ಸೇವಿಸಿದರೆ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ.



ಇದು ವಾತ ಮತ್ತು ಪಿತ್ತದೋಷಗಳನ್ನು ಕಡಿಮೆ ಮಾಡುವ ವಿಶೇಷ ಗುಣವನ್ನು ಹೊಂದಿದ್ದು, ಕಫದೋಷವನ್ನು ಹೆಚ್ಚು ಮಾಡುತ್ತದೆ. ಆದುದರಿಂದ ವಾತ ಮತ್ತು ಪಿತ್ತ ಸಮಸ್ಯೆ ಇರುವವರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಹುದು. ಆದರೆ ಕಫ ಸಮಸ್ಯೆ ಇರುವವರು ಇದನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.

 

ವಾತ ಮತ್ತು ಪಿತ್ತ ಸಮಸ್ಯೆ ಇರುವವರು ಪ್ರತಿದಿನ 10 ರಿಂದ 20 ಮಿ.ಲೀ. ಅಂದರೆ 2ರಿಂದ 4 ಚಮಚ ಕಾಯಿಸಿದ ತುಪ್ಪವನ್ನು ಊಟದ ಜೊತೆ ಉಪಯೋಗಿಸಬಹುದು. ಆದರೆ ಕಫ ಸಮಸ್ಯೆ ಇರುವವರು ದಿನದಲ್ಲಿ 2 ರಿಂದ 3 ಚಮಚ ಅಂದರೆ 10 ರಿಂದ 15 ಮಿ.ಲೀ. ಪ್ರಮಮಾಣವನ್ನು ಮೀರಿ ಉಪಯೋಗಿಸುವುದು ಒಳ್ಳೆಯದಲ್ಲ.

 

ವಿದ್ಯಾರ್ಥಿಗಳು, ಪ್ರೌಢರು, ಗರ್ಭಿಣಿಯರು, ಶ್ರಮಜೀವಿಗಳು, ಕ್ರೀಡಾಪಟುಗಳು, ಬುದ್ಧಿಜೀವಿಗಳು ತುಪ್ಪವನ್ನು ಅಧಿಕ ಪ್ರಮಾಣದಲ್ಲಿ ಉಪಯೋಗಿಸಬಹುದು. ಆದರೆ ವ್ಯಾಯಾಮವಿಲ್ಲದೆ ಕುಳಿತು ಕೆಲಸ ಮಾಡುವವರು, ಅತಿಸ್ಥೂಲ ದೇಹವುಳ್ಳವರು, ಅಜೀರ್ಣ ರೋಗವುಳ್ಳವರು ಹಾಗೂ ಕಫ ಸಮಸ್ಯೆ ಇರುವವರು  ತುಪ್ಪವನ್ನು ಸೇವಿಸಬಾರದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ