ಬೆಂಗಳೂರು : ಮೂಳೆಗಳ ಸವೆತ, ನೋವು ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಲ್ಲಿ ಕಂಡುಬರುತ್ತದೆ. ಈ ಸಮಸ್ಯೆಯಿಂದ ದೂರವಾಗಲು ನೀವು ಕ್ಯಾಲ್ಸಿಯಂ ಅಧಿಕವಾಗಿರುವ ಈ ಸಿಹಿ ಉಂಡೆಗಳನ್ನು ತಯಾರಿಸಿ ತಿನ್ನಿ.
ಬೇಕಾಗುವ ಸಾಮಾಗ್ರಿಗಳು : 1 ಕಪ್ ಬಿಳಿ ಎಳ್ಳು, 2 ಕಪ್ ಖರ್ಜೂರ , ½ ಕಪ್ ಒಣ ಕೊಬ್ಬರಿ, ಸ್ವಲ್ಪ ಏಲಕ್ಕಿ ಪುಡಿ.
ಬಿಳಿ ಎಳ್ಳನ್ನು ಕೆಂಪಾಗುವವರೆಗೂ ಹುರಿದುಕೊಳ್ಳಿ. ಬಳಿ ಇದು ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ತರಿತರಿಯಾಗಿ ಪುಡಿ ಮಾಡಿ. ಬಳಿಕ ಅದಕ್ಕೆ ಖರ್ಜೂರ , ಒಣ ಕೊಬ್ಬರಿ, ಸ್ವಲ್ಪ ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ ಮತ್ತೆ ಮಿಕ್ಸಿಯಲ್ಲಿ ನೀರು ಹಾಕದೆ ರುಬ್ಬಿ. ಬಳಿಕ ಅದರಿಂದ ಉಂಡೆಗಳನ್ನು ಕಟ್ಟಿಕೊಳ್ಳಿ. ಇದರಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುವುದರಿಂದ ಇದನ್ನು ಸೇವಿಸಿದರೆ ಮೂಳೆಗಳ ಸವೆತ, ಸಂಧಿ ನೋವು ಕಡಿಮೆಯಾಗುತ್ತದೆ.