ನಿಮ್ಮ ಹಲ್ಲುಗಳು ಚೆನ್ನಾಗಿ ಹೊಳೆಯುವಂತೆ ಮಾಡಲು ಬಾಳೆಹಣ್ಣಿನ ಸಿಪ್ಪೆ ಸಾಕಷ್ಟು ಉಪಯೋಗಕ್ಕೆ ಬರುತ್ತದೆ. ಪ್ರತಿದಿನ ಬೆಳಿಗ್ಗೆ, ಸಾಯಂಕಾಲ ಒಂದು ನಿಮಿಷ ಬಾಳೆಹಣ್ಣಿನ ಸಿಪ್ಪೆಯಿಂದ ಉಜ್ಜಿರಿ. ಸಿಪ್ಪೆಯಲ್ಲಿರುವ ಪೊಟಾಷಿಯಂ, ಮ್ಯಾಂಗನೀಸ್, ಮೆಗ್ನೀಷಿಯಂ ಖನಿಜಾಂಶಗಳು ಹಲ್ಲುಗಳು ಹೊಳೆಯುವಂತೆ ಮಾಡುತ್ತದೆ. ಕಿತ್ತಳೆ ಹಣ್ಣಿನ ಸಿಪ್ಪೆಯಿಂದಲೂ ಪ್ರಯತ್ನಿಸಬಹುದು.
ಸ್ಟ್ರಾಬೆರಿಯಲ್ಲಿ ಹಲ್ಲುಗಳನ್ನು ಹೊಳಪಿಸುವ ಅನೇಕ ಖನಿಜಾಂಶಗಳು ಇವೆ. ಸ್ಟ್ರಾಬೆರಿಯನ್ನು ನುಣ್ಣಗೆ ಜಜ್ಜಿ, ಅದನ್ನ ಹಲ್ಲುಗಳಿಗೆ ಹಚ್ಚಿ ಮೂರು ನಿಮಿಷಗಳ ಹಾಗೆ ಇರಿಸಬೇಕು. ಸ್ಟ್ರಾಬೆರಿಯಲ್ಲಿರುವ ಮಾಲಿಕ್ ಆಸಿಡ್ ಹಲ್ಲುಗಳನ್ನು ಬೆಳ್ಳಗೆ ಮಾಡುತ್ತದೆ. ಅಷ್ಟೇ ಅಲ್ಲದೆ ಅದರಲ್ಲಿರುವ ಫೈಬರ್ ಹಲ್ಲಿನ ಮಧ್ಯದಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶಗೊಳಿಸಿ ಹಲ್ಲುಗಳು ಶುಭ್ರವಾಗಿರುವಂತೆ ಮಾಡುತ್ತದೆ.
ಧೂಮಪಾನದಿಂದ ಹಳದಿಯಾಗಿರುವ ಹಲ್ಲುಗಳು, ಅನೇಕ ರೋಗಗಳು ಬರುವುದಕ್ಕೆ ಕಾರಣವಾಗುತ್ತದೆ. ನಿಮ್ಮ ಹಲ್ಲುಗಳು ಹೊಳೆಯುತ್ತಾ, ಆರೋಗ್ಯವಾಗಿರಬೇಕಾದರೆ ಧೂಮಪಾನ ಮಾಡಬಾರದು.
ಕ್ಯಾರಟ್ ಅನ್ನು ಶುಭ್ರವಾಗಿ ತೊಳೆದು, ಅಗಿದರೆ ಸಾಕು, ಅದರ ರಸ ಕ್ಲೀನರ್ ಆಗಿ ಕೆಲಸ ಮಾಡುತ್ತದೆ. ಹಾಗೆಯೇ ಹಲ್ಲಿನಲ್ಲಿರುವ ಪಾಚಿಯನ್ನು ತೊಲಗಿಸುತ್ತದೆ. ಇದು ಬ್ಯಾಕ್ಟೀರಿಯಾವನ್ನು ನಾಶಗೊಳಿಸುವುದಲ್ಲದೆ... ಆರೋಗ್ಯವಂತವಾದ ದವಡೆ ಹಲ್ಲು ಬೆಳ್ಳಗಾಗುವಂತೆ ಮಾಡುತ್ತದೆ. ಬಾಯಿಯಿಂದ ಬರುವ ದುರ್ವಾಸನೆಗೆ ಕಾರಣವಾಗಿರುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ.