ಮೂಲವ್ಯಾದಿಗೆ ಮನೆಯಲ್ಲೇ ಈ ಹಣ್ಣಿನಿಂದ ಚಿಕಿತ್ಸೆ ನೀಡಿ ನಿವಾರಿಸಿಕೊಳ್ಳಬಹುದು

ಭಾನುವಾರ, 30 ಸೆಪ್ಟಂಬರ್ 2018 (15:12 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಮೂಲವ್ಯಾದಿ ಅನ್ನೋದು ಒಂದು ಸಾಮಾನ್ಯವಾದ ಕಾಯಿಲೆಯಾಗಿದೆ ಹಾಗಾಗಿ ಇದಕ್ಕೆ ಹಲವು ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಆಯುರ್ವೇದದ ಪ್ರಕಾರ ಮೂಲವ್ಯಾಧಿಗೆ ನಿಂಬೆ ಹಣ್ಣಿನ ಚಿಕಿತ್ಸೆ ಉತ್ತಮ. ಅದನ್ನು ಹೇಗೆ ಉಪಯೋಗಿಸಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ.


ಮೂಲವ್ಯಾದಿಯಿಂದಾಗಲಿ ಅಥವಾ ಇತರೆ ಕಾರಣದಿಂದ ನಿಮ್ಮ ಗುದದ್ವಾರದಲ್ಲಿ ರಕ್ತ ಸ್ರಾವಾಗುತಿದ್ದರೆ ಹೀಗೆ ಮಾಡಿ. ನಿಮ್ಮ ಊಟ ಮುಗಿದ ಕೂಡಲೇ ಒಂದು ನಿಂಬೆ ಹಣ್ಣನು ನಿಮ್ಮ ಬಾಯಿಯಲ್ಲಿ ಹಾಕಿಕೊಂಡು ಹಲ್ಲಿನಿಂದ ಚೆನ್ನಾಗಿ ಅಗೆದು ಅದರ ಪೂರ್ಣ ರಸವನ್ನು ಕುಡಿಯಬೇಕು ಇದರಿಂದ ನಿಮ್ಮ ಮೂಲವ್ಯಾದಿ ಸಮಸ್ಯೆಯ ಜೊತೆಗೆ ರಕ್ತ ಪಿತ್ತ ಕೂಡ ಪರಿಹಾರವಾಗುತ್ತದೆ. ಈ ರೀತಿಯಾಗಿ ಎರಡು ಅಥವಾ ಮೂರೂ ವಾರಗಳ ಕಾಲ ಮಾಡಬೇಕು.


ಇನ್ನು 50 ಗ್ರಾಂ ನಷ್ಟು ನಿಂಬೆಯ ಚಿಗುರು ಎಲೆಯನ್ನು ನುಣ್ಣಗೆ ಅರೆದು 150 ಗ್ರಾಂ ಹಸಿವಿನ ಬೆಣ್ಣೆಯೊಂದಿಗೆ ಮಿಶ್ರಣ ಮಾಡಿ ಒಂದು ರಾತ್ರಿ ಅದನ್ನು ಬಿಟ್ಟು ಮಾರನೇ ದಿನ ಅದರಲ್ಲಿ ತುಪ್ಪ ಕಾಯಿಸಿಕೊಂಡು ಮೊಳಕೆ ಬಂದಿರುವ ಜಾಗಕ್ಕೆ ಹಚ್ಚುತ್ತಾ ಬಂದರೆ ಎರಡು ಅಥವಾ ಮೂರೂ ವಾರಗಳಲ್ಲಿ ನಿಮ್ಮ ಮೊಳಕೆ ಮಾಯವಾಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ