ತುರಿಕೆ ಕಜ್ಜಿಗೆ ಬೆಸ್ಟ್ ಔಷಧಿ ಈ ಎಣ್ಣೆ!

ಶುಕ್ರವಾರ, 6 ಜುಲೈ 2018 (06:45 IST)
ಬೆಂಗಳೂರು : ಕಜ್ಜಿ ಎಂಬುದು ಚರ್ಮದ ಮೇಲೆ ಕಾಣಿಸಿಕೊಳ್ಳುವ ತುರಿಕೆ ಗಾಯವಾಗಿದೆ. ಇದು ಮುಖ್ಯವಾಗಿ ತೊಣಚಿಯಂತಹ ಹುಳಗಳಿಂದಾಗಿ ಉಂಟಾಗುತ್ತದೆ. ಈ ತುರಿಕಜ್ಜಿ ನವೆಯಿಂದ ತುಂಬಾ ಕಿರಿಕಿರಿಯುಂಟಾಗುತ್ತದೆ. ಇದಕ್ಕೆ ಬೆಸ್ಟ್ ಔಷಧಿ ಎಂದರೆ ಅದು ಬೇವಿನ ಎಣ್ಣೆ.


ನಾಲ್ಕು ಕಪ್ ಬೇವಿನ ಎಲೆಗಳನ್ನು ರುಬ್ಬಿ ಪೇಸ್ಟ್ ತಯಾರಿಸಿ. ಅದಕ್ಕೆ, ಒಂದು ಕಪ್ ತಾಜಾ ಅರಿಶಿನ ಸೇರಿಸಿ. ತೊಂದರೆಗೊಳಗಾದ ಪ್ರದೇಶಕ್ಕೆ ಈ ಪೇಸ್ಟ್ ಹಚ್ಚಿ. ಒಣಗಲು ಬಿಡಿ. ನಂತರ ಬಕೆಟ್ ಅಥವಾ ಸ್ನಾನದ ಟಬ್‌ಗೆ,  ಬೇವಿನ ಎಣ್ಣೆಯ ಕೆಲ ಹನಿಗಳನ್ನು ಸೇರಿಸಿ ಮತ್ತು ಸರಿಯಾಗಿ ತೈಲ ಎಲ್ಲೆಡೆ ಪ್ರಸರಿಸುವಂತೆ ಮಾಡಿ. ಸ್ನಾನಕ್ಕೆ ಈ ನೀರನ್ನು ಬಳಸಿ, ಸ್ನಾನದ ನಂತರ ಬೇವಿನ ಲೋಷನ್ ಬಳಸಿ.


ಒಂದು ರಾತ್ರಿಯೊಳಗೆ ಕಜ್ಜಿ ಮಾಯವಾಗುತ್ತದೆ ಎಂದು ನಿರೀಕ್ಷಿಸಬೇಡಿ. ಬೇವಿನ ಎಣ್ಣೆ ಚರ್ಮಕ್ಕೆ ಕಿರಿಕಿರಿಯನ್ನುಂಟು ಮಾಡುವ ತೊಣಚಿಗಳ ವಂಶಾಭಿವೃಧಿಯನ್ನು ತಡೆಯುತ್ತದೆ. ಹೀಗಾಗಿ, ನೀವು ಬೇವಿನ ತೈಲ ಬಳಸಲು ಆರಂಭಿಸಿದ ಬಳಿಕ ಪರಿಣಾಮ ಕಂಡುಬರಲು ಒಂದು ವಾರ ಬೇಕಾಗುತ್ತದೆ. ಆದ್ದರಿಂದ ನಿಯಮಿತವಾಗಿ ಇದನ್ನು ಬಳಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ