ಬೆಂಗಳೂರು: ಇಂದಿನ ದುಬಾರಿ ಯುಗದಲ್ಲಿ ಊಟ ಮಾಡಿಯೂ ಮಿಕ್ಕಿದ ಅನ್ನವನ್ನು ಹಾಗೆಯೇ ಚೆಲ್ಲಲು ಯಾರಿಗೂ ಮನಸ್ಸಾಗುವುದಿಲ್ಲ. ಹಾಗಿದ್ದರೆ ಅದನ್ನು ಆರೋಗ್ಯಕ್ಕೆ ತೊಂದರೆಯಾಗದಂತೆ ಸೇವಿಸಲು ಇಲ್ಲಿದೆ ಟ್ರಿಕ್ಸ್.
ರಾತ್ರಿ ಊಟ ಮಾಡಿದ ಮೇಲೆಯೂ ಅನ್ನ ಮಿಕ್ಕಿದರೆ ಅದನ್ನು ಚೆಲ್ಲಲು ಮನಸ್ಸಾಗುವುದಿಲ್ಲ. ಕೆಲವರು ಇದರಿಂದ ಬೇರೆ ಬೇರೆ ಖಾದ್ಯ ಮಾಡುತ್ತಾರೆ. ಸೆಂಡಿಗೆ, ವಡೆ, ಚಿತ್ರಾನ್ನ ಈ ರೀತಿ ಅನೇಕ ರೀತಿಯಲ್ಲಿ ಮರುಬಳಕೆ ಮಾಡಬಹುದು. ಆದರೆ ಅದರ ಹೊರತಾಗಿಯೂ ಅನ್ನವನ್ನು ಮರುಬಳಕೆ ಮಾಡಬಹುದು.
ಉಳಿದ ಅನ್ನವನ್ನು ಬಿಸಿ ಮಾಡದೇ ಸೇವಿಸಿದರೆ ಅಜೀರ್ಣ, ಫುಡ್ ಪಾಯಿಸನಿಂಗ್ ಇತ್ಯಾದಿ ಆರೋಗ್ಯ ಸಮಸ್ಯೆಯಾಗಬಹುದು. ಹಾಗಂತ ಮಿಕ್ಕಿದ ಅನ್ನವನ್ನು ರೂಂ ಟೆಂಪರೇಚರ್ ನಲ್ಲಿ ಇಡುವಂತೆಯೂ ಇಲ್ಲ. ಒಂದು ವೇಳೆ ಅನ್ನ ಮಿಕ್ಕಿದರೆ ಅದನ್ನು ಒಂದು ಗಂಟೆಯೊಳಗೆ ಕೂಲ್ ಮಾಡಿ. ಬಳಿಕ ಫ್ರಿಡ್ಜ್ ನಲ್ಲಿಟ್ಟು 24 ಗಂಟೆಯೊಳಗೆ ಮತ್ತೆ ಚೆನ್ನಾಗಿ ಕುದಿಯುವ ಹಂತಕ್ಕೆ ಬಿಸಿ ಮಾಡಿ ಬಳಸಬಹುದು.
ಫ್ರಿಡ್ಜ್ ನಲ್ಲಿಟ್ಟರೂ ಒಂದು ದಿನಕ್ಕಿಂತ ಹೆಚ್ಚು ಇಟ್ಟು ಅನ್ನ ಬಳಕೆ ಮಾಡಬೇಡಿ. ಇದು ಆರೋಗ್ಯ ಒಳ್ಳೆಯದಲ್ಲ. ಅದೇ ರೀತಿ ಕೊಠಡಿ ತಾಪಮಾನದಲ್ಲಿರಿಸಿ ಬಿಸಿ ಮಾಡದೆಯೇ ಸೇವಿಸಿದರೆ ಆರೋಗ್ಯ ಸಮಸ್ಯೆಯಾಗಬಹುದು.