ಈ ರಾಜ್ಯಗಳಲ್ಲಿ ಪರಪುರುಷರಿಗೆ ಹೆಂಡತಿಯರನ್ನೇ ಬಾಡಿಗೆ ಕೊಡುತ್ತಾರಂತೆ ಗಂಡಂದಿರು!

ಸೋಮವಾರ, 3 ಸೆಪ್ಟಂಬರ್ 2018 (07:01 IST)
ಮಧ್ಯಪ್ರದೇಶ : ನಾವು ಮನೆಗಳನ್ನ , ಅಂಗಡಿಗಳನ್ನ, ವಸ್ತುಗಳನ್ನ, ಬಟ್ಟೆಗಳನ್ನ, ವಾಹನಗಳನ್ನ ಬಾಡಿಗೆಗೆ ಕೊಡುವುದನ್ನು ಕೇಳಿದ್ದೇವೆ. ಆದರೆ ಮಧ್ಯಪ್ರದೇಶ ಮತ್ತು ಗುಜರಾತ್ ನ ಕೆಲ ಗ್ರಾಮಗಳಲ್ಲಿ ಗಂಡಂದಿರು ತಮ್ಮ ಪತ್ನಿಯರನ್ನೇ ಬಾಡಿಗೆ ರೂಪದಲ್ಲಿ ನೀಡುತ್ತಿದ್ದಾರಂತೆ.


ಇದು ಅಲ್ಲಿನ ಜನರು ಆಚರಿಸುವ ‘ಧಡಿಚ್ ಪ್ರಥ’ ಎಂಬ ವಿಚಿತ್ರ ಪದ್ಧತಿಯಾಗಿರುವ ಕಾರಣ ಪರಪುರುಷರೊಂದಿಗೆ ಹೋಗಲು ಇಷ್ಟವಿಲ್ಲದಿದ್ದರೂ ಪತ್ನಿಯರು ಇದಕ್ಕೆ ಒಪ್ಪಲೇಬೇಕಂತೆ. ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಕೆಲ ಗ್ರಾಮಗಳು ಮತ್ತು ಗುಜರಾತ್​ನ ಭರುಚ್​ ಗ್ರಾಮದಲ್ಲಿ ಈ ಪದ್ಧತಿ ಇನ್ನೂ ಜಾರಿಯಲ್ಲಿದೆಯಂತೆ.


ಧಡಿಚ್​ ಪ್ರಥ ಪದ್ಧತಿ :
ಅಲ್ಲಿನ ಮೇಲ್ಜಾತಿ ಕುಟುಂಬಸ್ಥರ ಮಕ್ಕಳಿಗೆ ಮದುವೆ ಆಗದಿದ್ದಾಗ ಕೆಳವರ್ಗದವರ ಪತ್ನಿಯರನ್ನು ಬಾಡಿಗೆ ರೂಪದಲ್ಲಿ ತರುವ ಪದ್ಧತಿಯೇ ಧಡಿಚ್​ ಪ್ರಥ ಪದ್ಧತಿ.


ಈ ಪದ್ಧತಿ ಆಚರಿಸಲು ಮುಖ್ಯ ಕಾರಣ:
ಅಲ್ಲಿನ ಮೇಲ್ಜಾತಿಯ ಕುಟುಂಬಸ್ಥರು ಗಂಡು ಮಗು ವಂಶೋದ್ಧಾರಕ ಎಂದು ಪರಿಗಣಿಸುವ ಕಾರಣ ಹೆಣ್ಮಕ್ಕಳು ಹುಟ್ಟಿದ್ರೆ ಕಣ್ಣುಬಿಡುವ ಮುಂಚೆನೇ ಸಾಯಿಸುತ್ತಾರಂತೆ. ಇದರಿಂದ ಮೇಲ್ಜಾತಿಯಲ್ಲಿ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳೇ ಹೆಚ್ಚಾಗಿದ್ದು, ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗದ ಕಾರಣದಿಂದ  ಈ ಧಡಿಚ ಪ್ರಥ ಪದ್ಧತಿ ಹುಟ್ಟಿಕೊಂಡಿದೆಯಂತೆ.


ಇನ್ನು ಗಂಡಂದಿರು ಬಾಂಡ್​ ಮತ್ತು ಕರಾರು ಮೂಲಕ ತಮ್ಮ ಹೆಂಡ್ತಿಯರನ್ನು ದಿನಕ್ಕೆ, ತಿಂಗಳಿಗೆ ಅಥವಾ ವರ್ಷಕ್ಕಾದರೂ ಬಾಡಿಗೆಗೆ ನೀಡುತ್ತಿದ್ದಾರಂತೆ. ಅಲ್ಲದೇ ಗಂಡಂದಿರು ತಮ್ಮ ಹೆಂಡ್ತಿಯರನ್ನು 10 ರೂಪಾಯಿಯಿಂದ ಲಕ್ಷದವರೆಗೂ ಬಾಡಿಗೆಗೆ ನೀಡುತ್ತಾರಂತೆ. ವಿಪರ್ಯಾಸವೆನೆಂದರೆ ಈ ಪದ್ಧತಿಯ ವಿರುದ್ಧ ಅಲ್ಲಿನ ಸರ್ಕಾರಗಳು  ಕೂಡ ವಿರೋಧ ವ್ಯಕ್ತಪಡಿಸುತ್ತಿಲ್ಲವಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ