ಕೂದಲಿನ ತೇವಾಂಶ ಕಾಪಾಡಿಕೊಳ್ಳಲು ಈ ವಿಧಾನ ಬೆಸ್ಟ್

ಸೋಮವಾರ, 17 ಜೂನ್ 2019 (09:37 IST)
ಬೆಂಗಳೂರು : ಮಾಲಿನ್ಯ, ರಾಸಾಯನಿಕ ವಸ್ತುಗಳ ಬಳಕೆ, ಸೂರ್ಯನ ಕಿರಣಗಳಿಂದ ಕೂದಲು ತೇವಾಂಶ ಕಳೆದುಕೊಂಡು ಒರಟಾಗಿ ಗುಂಗುರು ಕೂದಲಾಗುತ್ತದೆ. ಈ ಕೂದಲು ನೋಡಲು  ತುಂಬಾ ಸುಂದರವಾಗಿದ್ದರೂ ಕೂಡ ಪೋಷಣೆ ಮಾಡುವುದು ತುಂಬಾ ಕಷ್ಟ. ಇದಕ್ಕಾಗಿ ಕೆಮಕಲ್ ಯುಕ್ತ ಕ್ರೀಂಗಳನ್ನು ಬಳಸಿ ಕೂದಲನ್ನು ಮತ್ತಷ್ಟು ಹಾಳುಮಾಡಿಕೊಳ್ಳುವ ಬದಲು  ನೈಸರ್ಗಿಕ ವಸ್ತುಗಳಿಂದಲ್ಲೇ ಅದನ್ನು ನಯವಾಗಿಸಿ.




1.ತೆಂಗಿನ ಹಾಲು ಮತ್ತು ನಿಂಬೆರಸ:  ತೆಂಗಿನ ಹಾಲು ಪ್ರೋಟಿನ್ ನಿಂದ ಕೂಡಿದ್ದು ಇದು ಕೂದಲು ಮೃದುವಾಗಲು ಸಹಾಯಕವಾಗಿದೆ. ನಿಂಬೆ ವಿಟಮಿನ್ ಸಿಯನ್ನು ಒಳಗೊಂಡಿದ್ದು ಕೂದಲು ಬೆಳೆಯಲು ಸಹಾಯ ಮಾಡುತ್ತದೆ.

1 ಗ್ಲಾಸ್ ತೆಂಗಿನ ಹಾಲಿಗೆ 1 ನಿಂಬೆ ಹಣ್ಣಿನ ರಸ ಹಿಂಡಿ ಚೆನ್ನಾಗಿ ಮಿಕ್ಸ್ ಮಾಡಿ ಫ್ರಿಜ್ ನಲ್ಲಿಡಿ. ಇದು ಕ್ರೀಂ ತರಹ ಆದ ಮೇಲೆ ಅದನ್ನು ಕೂದಲನ್ನು ಸಣ್ಣ ಸಣ್ಣ ಭಾಗ ಮಾಡಿ ಹಚ್ಚಿ. ನಂತರ ತಲೆಯನ್ನು ಒಂದು ಕವರ್ ನಿಂದ ಮುಚ್ಚಿ. 20 ನಿಮಿಷ ಬಿಟ್ಟು ನಂತರ ತೊಳೆಯಿರಿ.


2. ಅಲೋವೆರಾ ಜೆಲ್ ಮತ್ತು ಆಲಿವ್ ಆಯಿಲ್: ಅಲೋವೆರಾ ಜೆಲ್ ಕೂದಲಿನ ತೇವಾಂಶವನ್ನು ಕಾಪಾಡುತ್ತದೆ. ಆಲಿವ್ ಆಯಿಲ್ ಕೂದಲ ಬೆಳವಣಿಗೆಗೆ ಸಹಾಯಕವಾಗಿದೆ.


1 ಚಮಚ ಅಲೋವೆರಾ ಜೆಲ್ ತೆಗೆದುಕೊಂಡು  ಅದಕ್ಕೆ 1 ಚಮಚ ಆಲಿವ್ ಆಯಿಲ್ ನ್ನು ಬಿಸಿ ಮಾಡಿ ಮಿಕ್ಸ್ ಮಾಡಿ ಇದನ್ನು ನಿಮ್ಮ ಕೂದಲಿಗೆ ಹಚ್ಚಿ 45 ನಿಮಿಷದ ನಂತರ ಸ್ನಾನ ಮಾಡಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ