ಆಲ್ಕೋಹಾಲ್ , ಧೂಮಪಾನ ಸೇವನೆಗಿಂತಲೂ ಅತ್ಯಂತ ಅಪಾಯಕಾರಿಯಂತೆ ಈ ಅಡುಗೆ ಎಣ್ಣೆ

ಬುಧವಾರ, 31 ಅಕ್ಟೋಬರ್ 2018 (14:51 IST)
ಬೆಂಗಳೂರು : ಹೆಚ್ಚಿನ ಜನರು ತಾಳೆ ಎಣ್ಣೆ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ ಎಂದು ಅಡುಗೆಗೆ ತಾಳೆ ಎಣ್ಣೆಯನ್ನೇ ಹೆಚ್ಚಾಗಿ ಬಳಸುತ್ತಾರೆ. ಆದರೆ ಇದು ಆಲ್ಕೋಹಾಲ್ ಹಾಗೂ ಧೂಮಪಾನ ಸೇವನೆಗಿಂತಲೂ ಅತ್ಯಂತ ಅಪಾಯಕಾರಿಯಾಗಿದೆ ಎಂದು ಹೇಳಲಾಗುತ್ತಿದೆ.


ಹೌದು. ಭಾರತದಲ್ಲಿ 50 ವರ್ಷದ ಒಳಗಿನವರು  ಹೆಚ್ಚಾಗಿ ಹೃದಯಾಘಾತದಿಂದ ಸಾವನಪ್ಪುತ್ತಿದ್ದಾರೆ. ಇದಕ್ಕೆ ಪಾಮ್ ಆಯಿಲ್ ಅಥವಾ ಖಾದ್ಯ ತಾಳೆ ಎಣ್ಣೆ ಕಾರಣವೆಂಬ  ಆತಂಕಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಹಾಗೇ ಭಾರತವು ವಿಶ್ವದಲ್ಲೇ ಬೃಹತ್ ತಾಳೆ ಎಣ್ಣೆ ಆಮದು ಮಾಡಿಕೊಳ್ಳುತ್ತಿರುವ ದೇಶವಾಗಿದೆ.


ಮಕ್ಕಳು ಇಷ್ಟಪಟ್ಟು ಸೇವಿಸುವ ಫಾಸ್ಟ್ ಫುಡ್‍ಗಳನ್ನು ತಾಳೆ ಎಣ್ಣೆಯಿಂದಲೇ ತಯಾರಾಗಿರುತ್ತವೆ ಎಂಬುದು ಮತ್ತೊಂದು ಆತಂಕಕಾರಿ ಸಂಗತಿ. ಇದನ್ನು ತಿಂದ ಮಕ್ಕಳು ಭವಿಷ್ಯದಲ್ಲಿ ಹೃದ್ರೋಗ ಮತ್ತು ಹೃದಯಾಘಾತಗಳಿಗೆ ಒಳಗಾಗುವ ಗಂಡಾಂತರವೂ ಇದೆ ಎನ್ನಲಾಗಿದೆ.


ಈ ಎಣ್ಣೆಯಲ್ಲಿನ ಹಾನಿಕಾರಕ ರಾಸಾಯನಿಕ ಅಂಶಗಳು ಮೆದುಳು, ಮತ್ತು ಹೃದಯದ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತವೆ. ಚಿಕ್ಕವಯಸ್ಸಿನಲ್ಲೇ ಮಧುಮೇಹ ರೋಗ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದರಿಂದ ಅಧಿಕವಾಗಿರುತ್ತದೆ ಎಂದು ಹೇಳಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ