ಬೆಂಗಳೂರು : ಕೆಲವರು ಕೂದಲಿಗೆ ಹರಳೆಣ್ಣೆಯನ್ನು ಬಳಸುತ್ತಾರೆ. ಇದರಿಂದ ಕೂದಲು ದಪ್ಪವಾಗಿ, ಕಪ್ಪಾಗಿ, ಆರೋಗ್ಯವಾಗಿ ಬೆಳೆಯುತ್ತದೆ. ಇದು ಕೂದಲಿನ ರಕ್ಷಣೆ ಮಾಡುತ್ತದೆ. ನೆತ್ತಿಯನ್ನು ತಂಪಾಗಿಸುತ್ತದೆ. ತಲೆ ಹೊಟ್ಟನ್ನು ನಿವಾರಿಸುತ್ತದೆ. ಹೀಗೆ ಹಲವು ಪ್ರಯೋಜನವನ್ನು ಹೊಂದಿದೆ. ಆದರೆ ಇದರಿಂದ ಕೆಲವು ಅಡ್ಡಪರಿಣಾಮಗಳು ಸಂಭವಿಸುತ್ತವೆ. ಅದು ಏನೆಂಬುದನ್ನು ತಿಳಿದುಕೊಳ್ಳಿ.
ಹರಳಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೆಲವರಿಗೆ ಹೊಟ್ಟೆಯ ಸೆಳೆತ ಸಮಸ್ಯೆ ಕಾಡುತ್ತದೆ, ಅತಿಸಾರ, ತಲೆತಿರುಗುವಿಕೆ, ವಾಕರಿಕೆ ಸಮಸ್ಯೆ ಕಾಡುತ್ತದೆ. ಅಲ್ಲದೇ ಉಸಿರಾಟದಲ್ಲಿ ತೊಂದರೆ ಮತ್ತು ಎದೆನೋವು ಕಾಣಿಸಿಕೊಳ್ಳುವ ಸಂಭವವಿದೆ. ಅಷ್ಟೇ ಅಲ್ಲದೇ ಚರ್ಮದ ದದ್ದು, ಗಂಟಲಿನ ಬಿಗಿತ ಕೂಡ ಕಾಡಬಹುದು. ಆದಕಾರಣ ಈ ಸಮಸ್ಯೆ ಕಂಡುಬಂದರೆ ಹರಳೆಣ್ಣೆ ಬಳಸದಿರುವುದೇ ಉತ್ತಮ.