ಒಂದೇ ಕ್ಷಣದಲ್ಲಿ ಕಳೆಗುಂದಿದ ಕಣ್ಣುಗಳನ್ನು ಫ್ರೆಶ್ ಆಗಿಸುವುದು ಹೇಗೆ ಗೊತ್ತಾ?
ಶುಕ್ರವಾರ, 9 ನವೆಂಬರ್ 2018 (13:38 IST)
ಬೆಂಗಳೂರು : ನೈಟ್ ಆಫೀಸ್ ಕೆಲಸಗಳನ್ನು ಮಾಡಿ ಕಣ್ಣುಗಳು ಕಳೆಗುಂದಿದ್ದರೆ, ಒಂದೇ ಕ್ಷಣದಲ್ಲಿ ಫ್ರೆಶ್ ಆಗುವಂತಹ ಐ-ವಾಶ್ ಅನ್ನು ನೀವೇ ತಯಾರಿಸಿ ಬಳಸಬಹುದು. ಅದು ಹೇಗೆಂಬ ಮಾಹಿತಿ ಇಲ್ಲಿದೆ ನೋಡಿ.
ಮೊದಲಿಗೆ ಒಂದು ಬಟ್ಟಲಿನಲ್ಲಿ ಫ್ರಿಡ್ಜ್ ಅಲ್ಲಿ ಇಟ್ಟಿದ್ದ ತಣ್ಣೀರನ್ನು ತೆಗೆದುಕೊಳ್ಳಿ ಮತ್ತು ಇದಕ್ಕೆ ಕೆಲವು ಹನಿಗಳಷ್ಟು ರೋಸ್ ವಾಟರ್ ಹಾಕಿ. ನಂತರ ಈ ಮಿಶ್ರಣಕ್ಕೆ 2-3 ಹನಿಗಳಷ್ಟು ಜೇನುತುಪ್ಪವನ್ನು ಬೆರೆಸಿ, ನಿಮ್ಮ ಒಂದು ಕಣ್ಣನ್ನು ಇದರೊಳಗೆ ಇಡಿ. ನಂತರ ಆ ಮಿಶ್ರಣವನ್ನು ಎಸೆದು, ಇನ್ನೊಂದು ಕಣ್ಣಿಗೆ ಇನ್ನೊಂದು ಬಾರಿ ಅದೇ ರೀತಿ ಮಿಶ್ರಣವನ್ನು ತಯಾರಿಸಿಕೊಳ್ಳಿ.ಇದಾದ ಮೇಲೆ ತಣ್ಣೀರನ್ನು ಕಣ್ಣುಗಳಿಗೆ ಎರೆಚಿಕೊಳ್ಳಿ. ಮೊದಲಿಗೆ ನಿಮ್ಮ ಕಣ್ಣುಗಳು ಸ್ವಲ್ಪ ಕೆಂಪಾಗಿರುವಂತೆ ಕಾಣಿಸಬಹುದು ಆದರೆ ಕೆಲವೇ ನಿಮಿಷಗಳಲ್ಲಿ ನಿಮ್ಮ ಕಣ್ಣುಗಳಿಗೆ ಫ್ರೆಶ್ ಎನಿಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.