ನಿಮ್ಮ ಕಣ್ಣಿನ ದೃಷ್ಟಿ ಹೆಚ್ಚಾಗಬೇಕೆ...? ಇಲ್ಲಿದೆ ನೋಡಿ ಟಿಪ್ಸ್!

ಮಂಗಳವಾರ, 20 ಮಾರ್ಚ್ 2018 (06:59 IST)
ಬೆಂಗಳೂರು: ನಮ್ಮ ದೇಹದ ಅಂಗಾಂಗಳಲ್ಲಿ ಕಣ್ಣು ಕೂಡ ಒಂದು, ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಉತ್ತಮವಾದ ಆಹಾರ, ಸಾಕಷ್ಟು ಹಸಿರು ತರಕಾರಿ, ಸೊಪ್ಪನ್ನು ಅಡುಗೆಯಲ್ಲಿ ಬಳಸುವುದರಿಂದ ಕಣ್ಣಿನ ಆರೋಗ್ಯವನ್ನು ಹೆಚ್ಚಿಸಬಹುದು. ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಕುರಿತು ಮಾಹಿತಿ ಇಲ್ಲಿದೆ ನೋಡಿ.


ಮಸಾಜ್: ಕಣ್ಣು ರೆಪ್ಪೆಯನ್ನು ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. ಇದರಿಂದ ಕಣ್ಣ ರೆಪ್ಪೆಯಲ್ಲಿನ ಸಣ್ಣ ಗ್ರಂಥಿಗಳು ಆರೋಗ್ಯವಾಗಿ ಉಳಿಯುತ್ತದೆ.

ಕೆಟ್ಟ ಚಟಗಳಿಂದ ದೂರವಿರಿ: ಧೂಮಪಾನ, ಮದ್ಯಪಾನಗಳು ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.

ತರಕಾರಿ ಸೇವನೆ:  ಕ್ಯಾರೆಟ್, ಹಸಿರು ತರಕಾರಿಗಳು, ಒಣ ಹಣ್ಣುಗಳು, ಮೀನು ಮೊದಲಾದ ಆಹಾರ ಪದಾರ್ಥಗಳು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.

ಮೇಕಪ್: ರಾತ್ರಿ ಮಲಗುವ ಮುನ್ನ ಕಣ್ಣಿನ ಮೇಕಪ್ ಗಳನ್ನು ತೊಳೆದು ಮಲಗಬೇಕು.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ