ಹೊಟ್ಟೆ ಹುಣ್ಣಿಗೆ ರಾಮಬಾಣ ಈ ಮನೆಮದ್ದುಗಳು

ಗುರುವಾರ, 10 ಮೇ 2018 (14:13 IST)
ಬೆಂಗಳೂರು : ನಮ್ಮ ಇತ್ತೀಚಿನ ಜೀವನ ಶೈಲಿಯಿಂದಾಗಿರುವ ಆಹಾರದಲ್ಲಿನ ಬದಲಾವಣೆಯಿಂದ ಆರೋಗ್ಯ ಬಹಳಷ್ಟು ಹದಗೆಡುತ್ತಿದೆ. ಈ ಆಧುನಿಕ ಆಹಾರ ಪದ್ದತಿಯಿಂದ ಹೊಟ್ಟೆ ಹುಣ್ಣಿನ ಸಮಸ್ಯೆ ಸಾಮಾನ್ಯವಾಗಿದೆ. ಇದಕ್ಕೆ ನಾವು ಬಹಳಷ್ಟು ವೈದ್ಯರ ಬಳಿ ಚಿಕಿತ್ಸೆಯನ್ನ ಪಡೆದರು ಆಹಾರ ಪದ್ದತಿಯಿಂದ ಪದೇ ಪದೇ ಈ ಸಮಸ್ಯೆ ಕಾಡುತ್ತಲೇ ಇರುತ್ತದೆ. ಈ ಹೊಟ್ಟೆ ಹುಣ್ಣಿಗೆ ಮನೆಯಲ್ಲಿಯೇ ಚಿಕಿತ್ಸೆಯನ್ನ ಪಡೆಯಬಹುದು.


* ಅಲೊವೆರಾದಲ್ಲಿ ದೇಹದ ಉಷ್ಣತೆಯನ್ನ ಕಡಿಮೆ ಮಾಡುವ ಶಕ್ತಿ ಇದೆ. ಅಲೊವೆರಾದ ರಸ ತೆಗೆದು ಜ್ಯೂಸ್ ಮಾಡಿ ಪ್ರತಿ ನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಿದ್ದರೆ, ಹೊಟ್ಟೆ ಹುಣ್ಣು ಮಾಯವಾಗುವುದು.

* ಜೇನು ತುಪ್ಪ ಸಿಹಿಯಾಗಿರುವಷ್ಟೇ ಅದರ ಗುಣವೂ ಸಹ ಸಿಹಿ. ಇದರಲ್ಲಿರುವ ಆಂಟಿಬ್ಯಾಕ್ಟೀರಿಯಲ್ ಅಂಶವು ಹೊಟ್ಟೆ ಹುಣ್ಣಿನಂತಹ ಸಮಸ್ಯೆಗೆ ಉತ್ತಮ ಪರಿಣಾಮವನ್ನ ನೀಡುತ್ತದೆ.

* ಎಲೆ ಕೋಸು ಸಹ ಹೊಟ್ಟೆ ಹುಣ್ಣಿನ ಸಮಸ್ಯೆ ಇರುವವರು ಸೇವಿಸಬೇಕಾದ ಪ್ರಮುಖ ತರಕಾರಿಗಳಲ್ಲಿ ಒಂದು. ಇದು ಅಮಿನೋ ಆಸಿಡ್ ಅಂಶವನ್ನು ಬಿಡುಗಡೆ ಮಾಡುವುದರಿಂದ ಹೊಟ್ಟೆಗೆ ಸರಿಯಾಗಿ ರಕ್ತ ಪೂರೈಕೆಯಾಗುವಂತೆ ಮಾಡುವುದು.

* ಬೆಳ್ಳುಳ್ಳಿ ಹಲವು ರೋಗಗಳಿಗೆ ರಾಮಬಾಣ. ಬೆಳ್ಳುಳ್ಳಿಯನ್ನು ತಿಂದರೆ ಹೊಟ್ಟೆ ಹುಣ್ಣು ಕಡಿಮೆಯಾಗುತ್ತದೆ. ಹಾಗೇ ತಿನ್ನಲು ಇಷ್ಟವಿಲ್ಲದಿದ್ದರೆ, ಅದರ ರಸ ತೆಗೆದು ಬೇರೆ ರೂಪದಲ್ಲಿ ಸೇವಿಸ ಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ