ಕಾಲಿನಲ್ಲಿ ಆಣೆ (Corns)ಯಾಗಿದ್ದೇಯಾ? ಇಲ್ಲಿದೆ ನೋಡಿ ಇದಕ್ಕೆ ಪರಿಹಾರ

ಭಾನುವಾರ, 16 ಡಿಸೆಂಬರ್ 2018 (07:37 IST)
ಬೆಂಗಳೂರು : ಕೆಲವರಿಗೆ ಕಾಲಿನಲ್ಲಿ  ಆಣೆಯಾಗುತ್ತದೆ. ಇದು ಹೆಚ್ಚಾಗಿ ಹೊಲದಲ್ಲಿ ಕೆಲಸ ಮಾಡುವವರಿಗೆ ಹಾಗೂ ನೀರಿನಲ್ಲಿ ಕೆಲಸ ಮಾಡುವವರಿಗೆ ಹೆಚ್ಚಾಗಿ ಕಂಡುಬರುತ್ತದೆ. ಇದನ್ನು ಮನೆಮದ್ದಿನಿಂದ ಗುಣಪಡಿಸಬಹುದು.


ಬಾಳೆ ಹಣ್ಣಿನ ಸಿಪ್ಪೆಯಲ್ಲಿರುವ ಬಿಳಿ ತಿರುಳನ್ನು ತೆಗೆದುಕೊಂಡು ಆಣೆಯ ಮೇಲಿಟ್ಟು ಬ್ಯಾಂಡೇಜ್ ಕಟ್ಟಿ. ಇದನ್ನು ಪ್ರತಿದಿನ ರಾತ್ರಿ ಒಂದು ತಿಂಗಳ ತನಕ ಮಾಡಿದರೆ ಆಣೆ ಗುಣವಾಗುತ್ತದೆ. ಕಾಯಿ ಪಪ್ಪಾಯವನ್ನು ಪೇಸ್ಟ್ ಮಾಡಿ ಆಣೆಯ ಮೇಲಿಟ್ಟು ಬ್ಯಾಂಡೇಜ್ ಕಟ್ಟಿ. ಇದನ್ನು ಪ್ರತಿದಿನ ರಾತ್ರಿ ಮಾಡಬೇಕು.


ಚಕ್ಕೆ ಪೌಡರ್ 1ಟೀ ಸ್ಪೂನ್  ತೆಗೆದುಕೊಂಡು ಅದಕ್ಕೆ ಸುಣ್ಣ1 ಚಿಟಿಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ರಾತ್ರಿಯ ವೇಳೆ ಆಣೆ ಮೇಲೆ ಇಟ್ಟು ಬಟ್ಟೆ ಕಟ್ಟಿ. ಹೀಗೆ ಮಾಡಿದರೆ  ಆಣೆ ಗುಣವಾಗುತ್ತದೆ. ಎಕ್ಕದ ಗಿಡದ ಎಲೆಯಿಂದ ಬರುವ ಹಾಲು 1ಟೀ ಸ್ಪೂನ್  ತೆಗೆದುಕೊಂಡು ಅದಕ್ಕೆ  ಹರಳೆಣ್ಣೆ 1ಟೀ ಸ್ಪೂನ್  ಮಿಕ್ಸ್ ಮಾಡಿ ಇದನ್ನು ಆಣೆಗೆ ಹಚ್ಚಿ ಬಟ್ಟೆ ಕಟ್ಟಿ. ಇದರದಲೂ ಆಣೆ ವಾಸಿಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ