ಹೆಚ್ಚುತ್ತಿರುವ ಡೆಂಗ್ಯೂ ತಡೆಯಲು ಈ ಸಲಹೆಗಳನ್ನು ಪಾಲಿಸಿ

Krishnaveni K

ಸೋಮವಾರ, 1 ಜುಲೈ 2024 (12:35 IST)
ಬೆಂಗಳೂರು: ಮಳೆಗಾಲ ಬಂತೆಂದರೆ ಸಾಕು ನಗರ ಪ್ರದೇಶಗಳಲ್ಲಿ ಡೆಂಗ್ಯೂ ಹಾವಳಿ ಜೋರಾಗುತ್ತದೆ. ಈಗ ಬೆಂಗಳೂರಿನಲ್ಲೂ ಡೆಂಗ್ಯೂ ಜ್ವರದ ಭೀತಿ ಶುರುವಾಗಿದ್ದು ಇದನ್ನು ತಡೆಗಟ್ಟಲು ಕೆಲವು ಟಿಪ್ಸ್ ಇಲ್ಲಿ ಕೊಡಲಾಗಿದೆ.

ವಿಪರೀತ ಜ್ವರದ ಜೊತೆಗೆ ಮಾಂಸಖಂಡಗಳಲ್ಲಿ ನೋವು, ವಾಕರಿಕೆ, ಕಣ್ಣುಗಳಲ್ಲಿ ನೋವು, ತಲೆನೋವು ಇತ್ಯಾದಿ ಡೆಂಗ್ಯೂ ಜ್ವರದ ಪ್ರಮುಖ ಲಕ್ಷಣಗಳು. ಪ್ಲೇಟ್ ಲೆಟ್ ಸಂಖ್ಯೆ ತೀವ್ರ ಇಳಿಮುಖವಾಗುವುದರಿಂದ ಕೆಲವೊಮ್ಮೆ ಪ್ರಾಣಕ್ಕೇ ಅಪಾಯವುಂಟಾಗಬಹುದು. ಹೀಗಾಗಿ ಡೆಂಗ್ಯೂ ಜ್ವರದ ಬಗ್ಗೆ ಎಚ್ಚರಿಕೆ ಅಗತ್ಯ.

ಡೆಂಗ್ಯೂ ಜ್ವರ ಮುಖ್ಯವಾಗಿ ಹರಡುವುದು ಸೊಳ್ಳೆಗಳಿಂದ. ಹೀಗಾಗಿ ಮಳೆಗಾಲದಲ್ಲಿ ಮನೆ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಸಂಜೆಯಾಗುತ್ತಲೇ ಮನೆಯ ದ್ವಾರಗಳನ್ನು ಮುಚ್ಚಿ ಸೊಳ್ಳೆ ಮನೆಯೊಳಗೆ ಸೇರಿಕೊಳ್ಳದಂತೆ ನೋಡಿಕೊಳ್ಳಿ. ನೈಸರ್ಗಿಕವಾದ ಸೊಳ್ಳೆ ಬತ್ತಿಗಳನ್ನು ಬಳಸಿಕೊಳ್ಳಿ.

ಆದಷ್ಟು ಲೂಸ್ ಲೂಸ್ ಆದ ಸರಿಯಾದ ಫಿಟ್ಟಿಂಗ್ ಇರುವ ಬಟ್ಟೆಗಳನ್ನು ಧರಿಸಿ. ಸಾಧ್ಯವಾದರೆ ನಿಮ್ಮ ಮನೆ ವೈದ್ಯರ ಸಲಹೆ ಪಡೆದು ಡೆಂಗ್ಯೂ ಬಾರದಂತೆ ವ್ಯಾಕ್ಸಿನ್ ಪಡೆದುಕೊಳ್ಳಿ. ಆದಷ್ಟು ರೋಗ ನಿರೋಧಕ ಅಂಶ ಹೆಚ್ಚಿಸುವ ಆಹಾರಗಳನ್ನು ಸೇವಿಸಿ. ಜೊತೆಗೆ ಪ್ಲೇಟ್ ಲೆಟ್ ಸಂಖ್ಯೆ ಕಡಿಮೆಯಾಗದಂತೆ ಪಪ್ಪಾಯಿ ಎಲೆಯ ಜ್ಯೂಸ್, ಪಪ್ಪಾಯ ಸೇವನೆ ಮಾಡುತ್ತಿದ್ದರೆ ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ