ತಲೆಹೊಟ್ಟು ಸಮಸ್ಯೆಗೆ ಮನೆ ಮದ್ದು

ಶನಿವಾರ, 27 ಆಗಸ್ಟ್ 2016 (11:23 IST)
ತಲೆಹೊಟ್ಟು ಸಮಸ್ಯೆಯಿಂದ ಬೇಸತ್ತಿದ್ದೀರಾ? ತಲೆ ಸ್ನಾನ ಮಾಡಿದ ಮೇಲೆ, ತಲೆ ಬಾಚುವ ವೇಳೆ ತಲೆಹೊಟ್ಟು ನಿಮ್ಮನ್ನು ಕಂಗೆಡಿಸುತ್ತಿದ್ದರೆ ಅದಕ್ಕಾಗಿ ಯೋಚನೆ ಮಾಡಬೇಕಿಲ್ಲ. ತಲೆಹೊಟ್ಟು ನಿವಾರಣೆಗೆ ಮನೆಯಲ್ಲೇ ಸರಳವಾಗಿ ತಯಾರಿಸಬಹುದಾದ ಟಿಪ್ಸ್ ಇಲ್ಲಿದೆ...
ತಲೆಹೊಟ್ಟು ಅತಿ ಹೆಚ್ಚಾಗಿದ್ದರೆ ನಿಂಬೆಹಣ್ಣು ಬಳಸಿ, ನಿಂಬೆಹಣ್ಣಿನ ರಸವನ್ನು ಹಚ್ಚುವುದರಿಂದ ತಲೆಹೊಟ್ಟು ನಿವಾರಿಸಬಹುದು. 15 ರಿಂದ 20 ನಿಮಿಷದವರೆಗೆ ಹಚ್ಚಿಕೊಂಡು ಅದಾದ ಬಳಿಕ ಬಿಸಿ ನೀರಿನಿಂದ ತಲೆ ಸ್ನಾನ ಮಾಡಿಕೊಳ್ಳಬೇಕು.
 
ಹಳದಿ ಮೊಟ್ಟೆಯನ್ನು ಕೂಡ ಹಚ್ಚಿಕೊಳ್ಳಬಹುದು. ಹಳದಿ ಮೊಟ್ಟೆಯ ರಸವನ್ನು 15 ರಿಂದ 20 ನಿಮಿಷದವರೆಗೆ ಕೂದಲಿಗೆ ಹಚ್ಚಿ ಬಳಿಕ ಕೂದಲನ್ನು ತೊಳೆದುಕೊಳ್ಳಬೇಕು.
 
ಅಡಿಗೆ ಸೋಡಾ ತಲೆಹೊಟ್ಟು ನಿವಾರಣೆಗೆ ನೈಸರ್ಗಿಕ ಚಿಕಿತ್ಸೆಯಾಗಿದೆ.
 
ಆ್ಯಪಲ್ ಸೈಡ್ ವಿನೆಗರ್ಯನ್ನು ತಲೆಹೊಟ್ಟು ನಿವಾರಣೆಗೆ ಬಳಸಿಕೊಳ್ಳಬಹುದು. ಇದು ಕೂದಲನ್ನು ಆರೈಕೆ ಮಾಡುತ್ತದೆ. ತಲೆಹೊಟನ್ನು ತಡೆಗಟ್ಟಬಹುದು. 20 ನಿಮಿಷಗಳ ಕಾಲ ಕೂದಲಿಗೆ ವಿನೆಗರ್ ಹಚ್ಚಿಕೊಂಡು ಆ ಬಳಿಕ  ಹಚ್ಚಿಕೊಳ್ಳಬೇಕು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ವೆಬ್ದುನಿಯಾವನ್ನು ಓದಿ