ಥ್ರೆಡ್ಡಿಂಗ್ ನಿಂದ ಗುಳ್ಳೆಗಳು ಮೂಡುವುದನ್ನು ತಡೆಯಲು ಹೀಗೆ ಮಾಡಿ

ಬುಧವಾರ, 22 ಮೇ 2019 (06:45 IST)
ಬೆಂಗಳೂರು : ಹುಡುಗಿಯರು ತಾವು ಸುಂದರವಾಗಿ ಕಾಣಲು ಮುಖದಲ್ಲಿರುವ ಬೇಡದ ಕೂದಲನ್ನು ನಿವಾರಿಸಿಕೊಳ್ಳಲು ಥ್ರೆಡ್ಡಿಂಗ್ ಮಾಡಿಸಿಕೊಳ್ಳುತ್ತಾರೆ. ಆದರೆ ನಂತರ ಆ ಸ್ಥಳದಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳು ಮೂಡುತ್ತವೆ. ಅದಕ್ಕಾಗಿ ಥ್ರೆಡ್ಡಿಂಗ್ ವೇಳೆ ಈ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ.




ಥ್ರೆಡ್ಡಿಂಗ್ ಮಾಡಿಸಿಕೊಳ್ಳುವ ಮೊದಲು ಚರ್ಮವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದರಿಂದ ಥ್ರೆಡ್ಡಿಂಗ್ ಮಾಡುವ ವೇಳೆ ನೋವಾಗುವುದಿಲ್ಲ. ನಂತರ ಕಾಟನ್ ಬಟ್ಟೆಯಿಂದ ಚರ್ಮವನ್ನು ಮೃದುವಾಗಿ ಉಜ್ಜಿ. ಒಣ ಚರ್ಮವನ್ನು ಉಜ್ಜಿದ್ರೆ ನೋವು ಜಾಸ್ತಿಯಾಗುತ್ತದೆ. ನಂತರ ಪಾರ್ಲರ್ ಗೆ ಹೋಗಿ ಥ್ರೆಡ್ಡಿಂಗ್ ಮಾಡಿಸಿಕೊಳ್ಳಿ.


ಆಮೇಲೆ ಥ್ರೆಡ್ಡಿಂಗ್ ನಿಂದ ನೋವಾಗ್ತಾ ಇದ್ದಲ್ಲಿ ಅದರ ಮೇಲೆ ಐಸ್ ಪೀಸ್ ಇಟ್ಟು ಮಸಾಜ್ ಮಾಡಿ. ಮುಖವನ್ನು ಯಾವಾಗಲೂ ಗುಲಾಬಿ ರಸದಿಂದಲೇ ತೊಳೆಯಿರಿ. ಹೀಗೆ ಮಾಡುವುದರಿಂದ ಚರ್ಮದ ಮೇಲಾಗಿರುವ ಕೆಂಪು ಕಲೆ ಅಥವಾ ಮೊಡವೆ ಮಾಯವಾಗುತ್ತದೆ.


ಥ್ರೆಡ್ಡಿಂಗ್ ಮಾಡಿಕೊಂಡು ಬಂದ ಜಾಗವನ್ನು ಮರೆತೂ ಮುಟ್ಟಬೇಡಿ. ಥ್ರೆಡ್ಡಿಂಗ್ ನಂತರ ಯಾವುದೇ ಕಾರಣಕ್ಕೂ ಸ್ಟೀಮ್ ಚಿಕಿತ್ಸೆಯನ್ನು ಪಡೆಯಬೇಡಿ. ಪ್ರತಿ ಬಾರಿ ಈ ಕ್ರಮಗಳನ್ನು ಅನುಸರಿಸುತ್ತ ಬನ್ನಿ. ಥ್ರೆಡ್ಡಿಂಗ್ ನಂತರದ ಮೂಡುವ ಗುಳ್ಳೆಗಳಿಂದ  ಮುಕ್ತಿ ಪಡೆಯಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ