ಬೆಂಗಳೂರು ದಕ್ಷಿಣ ಲೋಕಸಭೆ ಚುನಾವಣೆ 2019 ನೇರ ಪ್ರಸಾರ | Bangalore south loksabha election 2019Live updates

[$--lok#2019#state#karnataka--$]
ಪ್ರಖ್ಯಾತ ಬಡಾವಣೆಗಳು ಹಾಗೂ ಪ್ರಬುದ್ಧ ಮತದಾರರನ್ನು ಹೊಂದಿರುವ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಕೈ- ಕಮಲ ಫೈಟ್ ನಡೆದಿದೆ. ಬಿಜೆಪಿಯಿಂದ ತೇಜಸ್ವಿ ಸೂರ್ಯ ಹಾಗೂ ಕಾಂಗ್ರೆಸ್ ನಿಂದ ಬಿ.ಕೆ.ಹರಿಪ್ರಸಾದ್ ಕಣದಲ್ಲಿದ್ದಾರೆ. 
 
ಈ ಮೊದಲು ಕಾಂಗ್ರೆಸ್ ಹಾಗೂ 1991ರಿಂದ ಬಿಜೆಪಿ ಭದ್ರಕೋಟೆಯಾಗಿದ್ದ ಬೆಂಗಳೂರು ದಕ್ಷಿಣದಲ್ಲಿ ಕಮಲ ಅರಳುತ್ತಲೇ ಇದೆ. 1996 ರಿಂದ ದಿ.ಅನಂತಕುಮಾರ ನಿರಂತರವಾಗಿ ಬಿಜೆಪಿಯಿಂದ ಗೆಲ್ಲುತ್ತಲೇ ಬಂದಿದ್ದರು. ಅವರ ಅನುಪಸ್ಥಿತಿಯಲ್ಲಿ ಬಿಜೆಪಿಯ ತೇಜಸ್ವಿ ಸೂರ್ಯ ಅಖಾಡದಲ್ಲಿದ್ದಾರೆ. ಸೂರ್ಯನ ಪ್ರಖರತೆ ತಡೆಗೆ ಕೈ ಪಡೆಯಿಂದ ಹರಿಪ್ರಸಾದ್ ಸನ್ನದ್ಧರಾಗಿದ್ದಾರೆ. 
 
2014 ರ ಚುನಾವಣೆಯಲ್ಲಿ ಕಾಂಗ್ರೆಸ್ ನ ನಂದನ್ ನಿಲೇಕಣಿಯವರನ್ನು ಬಿಜೆಪಿಯ ಅನಂತಕುಮಾರ್ 2 ಲಕ್ಷ 28 ಸಾವಿರ ಮತಗಳಿಂದ ಸೋಲಿಸಿದ್ದರು. 
[$--lok#2019#constituency#karnataka--$]
ಒಟ್ಟು 22,15,758 ರಲ್ಲಿ 11,53,622 ಪುರುಷರು, 10,61,796 ಮಹಿಳೆಯರು ಹಾಗೂ 340 ಇತರೆ ಮತದಾರರಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ