ಮಕ್ಕಳ ಜತೆ ತೊದಲು ಮಾತನಾಡುವುದೂ ಅಪಾಯವೇ

ಗುರುವಾರ, 2 ಫೆಬ್ರವರಿ 2017 (10:20 IST)
ಬೆಂಗಳೂರು:  ಚಿಕ್ಕ ಮಕ್ಕಳು ಮನೆಯಲ್ಲಿದ್ದರೆ, ನಾವೂ ಮಕ್ಕಳಾಗಿ ಬಿಡುತ್ತೇವೆ. ಅವರು ತೊದಲು ಮಾತನಾಡುತ್ತಿದ್ದರೆ, ನಾವೂ ತೊದಲು ಮಾತನಾಡಲು ಪ್ರಾರಂಭಿಸುತ್ತೇವೆ. ಆದರೆ ಹೀಗೆ ಮಾಡುವುದೂ ಒಳ್ಳೆಯದಲ್ಲ!

 
ಮಗು ಮಾತನಾಡಲು ಪ್ರಾರಂಭಿಸಿದ ಹಂತದಲ್ಲಿ ಕೆಲವು ಶಬ್ದಗಳನ್ನು ಅದರದೇ ರೀತಿಯಲ್ಲಿ ಉಚ್ಛಾರಣೆ ಮಾಡುತ್ತದೆ. ‘ನೀರು’ ಎನ್ನಲು ‘ಜೀಜಿ’ ಎನ್ನುವುದೆಲ್ಲಾ ಸಾಮಾನ್ಯ. ಅದು ತೊದಲು ನುಡಿಯಲ್ಲಿ ಮಾತನಾಡುವುದನ್ನು ಕೇಳಲು ನಮಗೆ ಆನಂದವೇ. ಹಾಗಂತ ಅದಾಗಿಯೇ ಹೇಳದಿದ್ದರೂ ಕೆಲವು ಶಬ್ದಗಳನ್ನು ನಾವೇ ತೊದಲು ನುಡಿಯಲ್ಲಿ ಕಲಿಸುವುದು ಒಳ್ಳೆಯದಲ್ಲ.

ಉದಾಹರಣೆಗೆ ‘ಹಸಿವು’ ಎನ್ನುವುದಕ್ಕೆ ನಾವು ಮುದ್ದಾಗಿ ‘ಹಚಿವು’ ಎನ್ನುವುದು ಇತ್ಯಾದಿ. ಇದರಿಂದ ಮಗುವೂ ಇದನ್ನೇ ಕಲಿಯುತ್ತದೆ. ಮತ್ತೆ ಅದನ್ನು ತಿದ್ದಲು ಕಷ್ಟವಾಗುತ್ತದೆ.  ಅದಕ್ಕಿಂತ ಹೆಚ್ಚು ಅದಕ್ಕೆ ಹೊಸ ಶಬ್ಧಗಳನ್ನು ಕಲಿಸುವಾಗಲೇ ಸರಿಯಾಗಿ ಬಳಕೆ ಮಾಡುವ ಹಾಗೆ ಕಲಿಸಿದರೆ ಮಗುವೂ ಸ್ಪಷ್ಟವಾಗಿ ಮಾತನಾಡಲು ಕಲಿಯಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ