ಮೊಡವೆ ಕಲೆಗಳಿಗೆ ಇಲ್ಲಿದೆ ಮನೆಯಲ್ಲೇ ಚಿಕಿತ್ಸೆ.. ವಿಡಿಯೋ

ಸೋಮವಾರ, 8 ಆಗಸ್ಟ್ 2016 (09:44 IST)
ಪಾರ್ಟಿಗೆ ಹೋಗಬೇಕಾ? ಡೇಟಿಂಗ್ ಗಾಗಿ ತೆರಳುತ್ತಿದ್ದೀರಾ? ಸಂದರ್ಶನಕ್ಕಾಗಿ ಹೋಗಲು ರೆಡಿಯಾಗಿದ್ದೀರಾ.. ಇದೀಗ ನೀವು ಮೊಡವೆ ಹಾಗೂ ಅದರ ಕಲೆಗಳಿಗಾಗಿ ಚಿಂತೆ ಮಾಡಬೇಕಾಗಿಲ್ಲ. ಈ ಸಿಂಪಲ್ ಆಗಿರೋ ಮಾರ್ಗದಿಂದ ಖಂಡಿತವಾಗಿಯೂ ಮೊಡವೆ ಸಮಸ್ಯೆಗಳಿಗೆ ನಿಮ್ಮ ಮನೆಯಲ್ಲೇ ಚಿಕಿತ್ಸೆ ತೆಗೆದುಕೊಳ್ಳಬಹುದು.
 
ಅಂದದ ಮುಖದ ಕನಸು ಕಾಣದವರಿಲ್ಲ. ಆದರೂ, ಏನೇ ಮಾಡಿದರೂ, ಮೊಡವೆ, ಕಪ್ಪು ಕಲೆ, ಕಳಾಹೀನ ಮುಖ. ಹೀಗೆ ಒಂದೇ, ಎರಡೇ? ಯುವಕ ಯುವತಿಯರಿಗೆ ನೂರೆಂಟು ಸಮಸ್ಯೆಗಳು. ಆದರೆ, ಇದಕ್ಕೆ ಪರಿಹಾರ ಕಾಣದೆ ಹಾಗೇ ದಿನದೂಡುವುದು ಇದ್ದೇ ಇದೆ. ಮೊಡವೆ ತೊಡೆದು ಹಾಕಲು ಮನೆಯಲ್ಲೇ ಚಿಕಿತ್ಸೆ ಮಾಡಿಕೊಳ್ಳಬಹುದು.
 
ಲೇಸರ್, ಕಾಸ್ಮೆಟಿಕ್ ಸರ್ಜರಿ ಮಾಡುಕೊಳ್ಳುತ್ತಿದ್ದರೆ ನಿಲ್ಲಿಸಿ ಬಿಡಿ, ಇದೆಲ್ಲಾ ಮುಖದ ತ್ವಚೆಗೆ ಉತ್ತಮವಾದುದಲ್ಲ. ನಿಮ್ಮ ಮುಖದ ಮೇಲಿನ ಕಲೆ, ಮೊಡವೆಗಳಿಗಾಗಿ ದುಡ್ಡು ವ್ಯಯಿಸಬೇಕಿಲ್ಲ. ನಿಮ್ಮ ಅಡುಗೆ ಮನೆಯಲ್ಲೇ ಇದೆ ಇದಕ್ಕೆ ಪರಿಹಾರ.

ಈ ವಿಡಿಯೋ ವೀಕ್ಷಿಸಿದ್ರೆ ಮೊಡವೆ ತೊಡೆದುಹಾಕಲು ಮನೆಯಲ್ಲೇ ತಯಾರಿಸಬಹುದಾದ ಕೆಲವು ಸರಳ ಉಪಾಯಗಳು ಇಲ್ಲಿವೆ. ಇದರಿಂದ ತ್ವರಿತವಾಗಿ ನಿಮಗೆ ರಿಸಲ್ಟ್ ಗೊತ್ತಾಗುತ್ತದೆ. ನಿತ್ಯವು ಇದೇ ರೀತಿ ಮಾಡುವುದರಿಂದ ಮುಖದ ಮೇಲಿನ ಮೊಡವೆಗಳು ಮಾಯವಾಗುವುದರಲ್ಲಿ  ಸಂಶಯವಿಲ್ಲ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ವೆಬ್ದುನಿಯಾವನ್ನು ಓದಿ