ಅರಿಶಿಣ ಹಳದಿ ಚಿನ್ನ: ಸೌಂದರ್ಯ, ಆರೋಗ್ಯ ಅಡುಗೆಗೂ ಸೈ

ಅತಿಥಾ

ಶುಕ್ರವಾರ, 5 ಜನವರಿ 2018 (17:59 IST)
ನಿಮಗೆ ಅರಿಶಿಣದಿಂದ ದೊರೆಯುವ ಆರೋಗ್ಯದ ಪ್ರಯೋಜನಗಳ ಕುರಿತು ತಿಳಿದಿದೆಯೇ? ಅರಿಶಿನ, ಹಿಂದಿಯಲ್ಲಿ ಹಲ್ದೀ ಎಂದೇ ಹೆಚ್ಚು ಪರಿಚಿತವಾಗಿರುವ ಈ ಹಳದಿ ಬಣ್ಣದ ಸಾಂಬಾರ ಪದಾರ್ಥವನ್ನು ನಿಸರ್ಗದ ಹಳದಿ ಚಿನ್ನವೆಂದೇ ಭಾರತದಲ್ಲಿ ಪರಿಗಣಿಸಲಾಗುತ್ತದೆ. 
ಇದು ಕೇವಲ ಸೌಂದರ್ಯ ವರ್ಧಿಸಲು, ಅಡುಗೆಯ ರುಚಿ ಹೆಚ್ಚಿಸುದು ಮಾತ್ರವಲ್ಲ, ಇದರಿಂದ ನಮಗೆ ಕೆಲವೊಂದು ಆರೋಗ್ಯಕಾರಿ ಪ್ರಯೋಜನಗಳು ಸಹ ಲಭ್ಯವಿವೆ. ಇದೊಂದು ಹಲವು ರೋಗಗಳಿಗೆ ಉಪಶಮನ ನೀಡುವ ಅದ್ಭುತ ಔಷಧಿಯೂ ಆಗಿದೆ. ಇದರಲ್ಲಿರುವ ಆಂಟಿಸೆಪ್ಟಿಕ್ ಗುಣಗಳಿಂದಾಗಿ ಇದನ್ನು ಆಂತರಿಕವಾಗಿ (ಅಡುಗೆಯಲ್ಲಿ) ಮತ್ತು ಬಾಹ್ಯವಾಗಿ (ತ್ವಚೆಗೆ) ನಾವು ಬಳಸುತ್ತಿದ್ದೇವೆ.
 
1. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ - 
ದಿನ ನಿತ್ಯದ ಅಡುಗೆಯಲ್ಲಿ ಬಳಸುವ ಅರಿಶಿಣ ನಾರು, ವಿಟಮಿನ್‌ ಸಿ, ಇ, ಕೆ ಮತ್ತು ಬಿ-6 ಪೌಷ್ಟಿಕಾಂಶಗಳ ಆಗರವಾಗಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
 
2. ಆಂಟಿ- ಆಕ್ಸಿಡೆಂಟ್ -
ಅರಿಶಿಣದಲ್ಲಿ ಕುರ್ಕುಮಿನ್ ಎಂಬ ಪ್ರಧಾನ ಅಂಶವಿರುತ್ತದೆ. ಇದು ಗ್ಲುಟಾಥಿಯೋನ್ ಎಂಬ ಪರಿಣಾಮಕಾರಿ ಆಂಟಿ-ಆಕ್ಸಿಡೆಂಟ್ ಅನ್ನು ಉತ್ಪಾದಿಸುತ್ತದೆ. ಇದು ನಮ್ಮ ದೇಹದಲ್ಲಿನ ಫ್ರೀ ರಾಡಿಕಲ್ಸ್‌ಗಳ ವಿರುದ್ಧ ಹೋರಾಡಿ, ವಯಸ್ಸಾದಂತೆ ಬರುವ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
 
3. ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ -
ಜೀರ್ಣ ಕ್ರಿಯೆಗೆ ಸಂಬಂಧಿಸಿದ ತೊಂದರೆಗಳನ್ನು ದೂರವಿಡುವಲ್ಲಿಯೂ ಅರಶಿನದ ಪಾತ್ರ ಪ್ರಮುಖವಾಗಿದೆ. ಇದು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಹೊಟ್ಟೆಯ ಹುಣ್ಣುಗಳು ಮತ್ತು ಕೊಲೈಟಿಸ್ ನ್ನು ಕಡಿಮೆಗೊಳಿಸುತ್ತದೆ. ಇದು ಒಂದು ಪ್ರಬಲ ನಂಜುನಿರೋಧಕವೂ ಆಗಿದೆ . ಇದು ಉತ್ತಮ ಜೀರ್ಣಕಾರಿ ಶಕ್ತಿ ಹೊಂದಿದ್ದು, ಹುಣ್ಣುಗಳು, ಅತಿಸಾರ ಮತ್ತು ಅಜೀರ್ಣವನ್ನು ತಡೆಯುತ್ತದೆ.
 
4. ಮುಟ್ಟಿನ ಸೆಳೆತವನ್ನು ಕಡಿಮೆ ಮಾಡುತ್ತದೆ -
ಇದು ಮುಟ್ಟಿನ ಸೆಳೆತ ಮತ್ತು ನೋವು ಸರಾಗಗೊಳಿಸುವ ಆಂಟಿಸ್ಪಾಸ್ಮೊಡಿಕ್‌ನ್ನು ಹೊಂದಿರುವ ಅರಿಶಿನ ಹಾಲು ಅದ್ಭುತ ಶಕ್ತಿಯನ್ನು ಹೊಂದಿದೆ. ಗರ್ಭಿಣಿ ಮಹಿಳೆಯರ ಸುಲಭ ಹೆರಿಗೆಗೆ ಅರಿಶಿನ ಹಾಲು ಸೇವಿಸುವುದು ಅತ್ಯಂತ ಒಳ್ಳೆಯದು. ಅಂಡಾಶಯದ ವೇಗವಾದ ಸಂಕೋಚನಕ್ಕೆ ಅರಿಶಿನ ಹಾಲನ್ನು ಸೇವಿಸಬಹುದು.
 
5. ಕ್ಯಾನ್ಸರ್ ತಡೆಯುತ್ತದೆ -
ಅರಿಶಿಣ ಹಾಲು, ಉರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಸ್ತನ, ಚರ್ಮ, ಶ್ವಾಸಕೋಶ, ಪ್ರಾಸ್ಟೇಟ್ ಮತ್ತು ಗುದನಾಳದ ಕ್ಯಾನ್ಸರ್ ನಂತಹ ಬೆಳವಣಿಯನ್ನು ತಡೆಯುತ್ತದೆ. ಇದು ಹಾನಿಕಾರಕ ಡಿಎನ್ಎಯ ಕ್ಯಾನ್ಸರ್ ಜೀವಕೋಶಗಳನ್ನು ತಡೆಯುತ್ತದೆ ಮತ್ತು ಚಿಕಿತ್ಸೆಯ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.
 
6. ಶೀತ ಮತ್ತು ಕೆಮ್ಮನ್ನು ಕಡಿಮೆ ಮಾಡುತ್ತದೆ -
ಅರಿಶಿಣ ಹಾಲು ವೈರಸ್ ವಿರೋದಿ ಮತ್ತು ಬ್ಯಾಕ್ಟೀರಿಯ ನಿರೋಧಕ ಗುಣಗಳನ್ನು ಹೊಂದಿರುವ ಕಾರಣ, ಕೆಮ್ಮು ಮತ್ತು ಶೀತಕ್ಕೆ ಒಂದು ಉತ್ತಮ ಪರಿಹಾರ ಎಂದು ಪರಿಗಣಿಸಲಾಗಿದೆ. ಇದು ನೋಯುತ್ತಿರುವ ಗಂಟಲು, ಕೆಮ್ಮು ಮತ್ತು ಶೀತಕ್ಕೆ ತ್ವರಿತ ಪರಿಹಾರ ನೀಡುತ್ತದೆ.
 
7. ರಕ್ತ ಶುದ್ಧೀಕರಿಸುತ್ತದೆ
ಅರಿಶಿಣ ಹಾಲು, ಆಯುರ್ವೇದ ಸಂಪ್ರದಾಯದಲ್ಲಿ ಅತ್ಯುತ್ತಮ ರಕ್ತ ಶುದ್ದೀಕರಣ/ ಕ್ಲಿನ್ಸರ್ ಎಂದು ಪರಿಗಣಿಸಲಾಗುತ್ತದೆ. ಇದು ದೇಹದಲ್ಲಿ ರಕ್ತ ಪರಿಚಲನೆಯ ಪುನಶ್ಚೇತನಗೊಳಿಸಲು ಮತ್ತು ವರ್ಧಿಸಲು ಸಹಾಯ ಮಾಡಬಹುದು. ಇದು ದುಗ್ಧನಾಳ ವ್ಯವಸ್ಥೆ ಮತ್ತು ಎಲ್ಲಾ ರಕ್ತನಾಳಗಳು ಶುದ್ಧೀಕರಿಸಲು ಕೂಡ ಅತ್ಯವಶ್ಯಕ.
 
8. ಗಾಯಗಳಿಗಾಗಿ ಹಾಗೂ ಬಿರುಕುಗಳನ್ನು ಕಡಿಮೆ ಮಾಡುತ್ತದೆ -
 
ತ್ವಚೆಗೆ ಸ೦ಬ೦ಧಿಸಿದ ಹಾಗೆ ಅರಿಶಿಣದ ಪುಡಿಯಿ೦ದಾಗುವ ಪ್ರಯೋಜನಗಳು ಒ೦ದೇ, ಎರಡೇ?! ಬಿರುಕು ಅಥವಾ ಗಾಯವಾದಾಗ ಕ್ರಮೇಣ ಅದು ಸೋ೦ಕಿಗೀಡಾಗಬಲ್ಲದು ಹಾಗೂ ಇದು ಕೀವಿನ ಸ೦ಚಯನಕ್ಕೆ ದಾರಿಮಾಡಿಕೊಡಬಲ್ಲದು. ಅರಿಶಿಣದ ಪುಡಿಯನ್ನು ನೀರಿಗೆ ಸೇರಿಸಿ ಪೇಸ್ಟ್ ಅನ್ನು ಸಿದ್ಧಪಡಿಸಿರಿ. ಈ ಪೇಸ್ಟ್ ಅನ್ನು ಬಾಧಿತ ಜಾಗಕ್ಕೆ ನೇರವಾಗಿ ಹಚ್ಚಿಕೊಳ್ಳುವುದರ ಮೂಲಕ ಸೋ೦ಕನ್ನು ಹಾಗೂ ಉರಿಯನ್ನು ಶಮನಗೊಳಿಸಿಕೊಳ್ಳಬಹುದು. ಸುಟ್ಟ ಗಾಯಕ್ಕೆ ಲೋಳೆಸರ ಮತ್ತು ಅರಿಶಿನ ಸೇರಿಸಿ ಹಚ್ಚಿದರೆ ಗಾಯ ಬೇಗ ವಾಸಿಯಾಗುತ್ತದೆ
 
9. ಅರಿಶಿಣ ಗರ್ಭಕೋಶವನ್ನು ಸ್ವಚ್ಛ ಮಾಡುತ್ತದೆ ಮತ್ತು ಶ್ವಾಸಕೋಶದ ಆರೋಗ್ಯವನ್ನು ಕಾಪಾಡುತ್ತದೆ ಹಾಗೂ ಜೀವಕೋಶಗಳನ್ನು ಪುನ:ಶ್ಚೇತನಗೊಳಿಸುತ್ತದೆ.
 
10. ಅರಿಶಿಣವು ಬೇಡವಾದ ಕೂದಲಿನ ಬೆಳವಣಿಗೆಯನ್ನು ತಡೆಗಟ್ಟುತ್ತದೆ. ಬಿಸಿ ಹಾಲಿಗೆ ಅರಿಶಿಣ ಹಾಕಿ ಚೆನ್ನಾಗಿ ಕುದಿಸಿ ಶೋಧಿಸಿ ಕುಡಿಯುವುದರಿಂದ ನೆಗಡಿ ಮತ್ತು ಕೆಮ್ಮು ಕಡಿಮೆಯಾಗುತ್ತವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ