ಫುಡ್‌ ಪಾಯ್ಸನ್‌‌ಗೆ ಇದನ್ನು ಸೇವಿಸಿ

ಅತಿಥಾ

ಬುಧವಾರ, 3 ಜನವರಿ 2018 (15:43 IST)
ನಿಮ್ಮ ಅಡುಗೆ ಮನೆಯಲ್ಲೇ ದೊರೆಯುವ ಈ ಔಷಧೀಯ ಪದಾರ್ಥಗಳನ್ನು ಬಳಸಿಕೊಂಡು ಫುಡ್ ಪಾಯಿಸನ್ ಆಹಾರ ವಿಷವಾಗುವಂತಹ ರೋಗಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
- ಫುಡ್‌ ಪಾಯ್ಸನ್‌ ಆದಾಗ ಏಲಕ್ಕಿಯು ಉತ್ತಮ ಪರಿಹಾರವನ್ನು ನೀಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುವ ಏಲಕ್ಕಿಯು ವಾಕರಿಕೆ, ವಾಂತಿ ಮೊದಲಾದ ಫುಡ್‌ ಪಾಯ್ಸನ್‌ ರೋಗ ಲಕ್ಷಣಗಳನ್ನು ಹೋಗಲಾಡಿಸುತ್ತದೆ.ಈ ಪಟ್ಟಿಯಲ್ಲಿರುವ ಇತರ ಮನೆಮದ್ದುಗಳಂತೆಯೇ ಏಲಕ್ಕಿ ಕೂಡ ರೋಗನಿರೋಧಕ ಸಾಮರ್ಥ್ಯವನ್ನು ಪಡೆದುಕೊಂಡಿದೆ.
 
- ಶುಂಠಿಯು ವಾಕರಿಕೆ, ವಾಂತಿ ಮೊದಲಾದ ಲಕ್ಷಣಗಳನ್ನು ಗುಣಪಡಿಸುತ್ತದೆ. ನಿಮ್ಮ ಜೀರ್ಣಕ್ರಿಯೆಯನ್ನು ಸಹ ಇದು ಸುಧಾರಿಸುತ್ತದೆ. ನಿಮ್ಮ ಹೊಟ್ಟೆಯನ್ನು ಹಗುರವಾಗಿಸುತ್ತದೆ. ಚಹಾ ಅಥವಾ ಜ್ಯೂಸ್‌ನಲ್ಲಿ ಶುಂಠಿಯನ್ನು ಬಳಸಿಕೊಳ್ಳಬೇಕು. ಶುಂಠಿಯನ್ನು ಜಗಿದು ರಸವನ್ನು ಕುಡಿದರೆ ಜೀರ್ಣಕ್ರಿಯೆಗೆ ಕೂಡ ಒಳ್ಳೆಯದು.
 
- ತುಳಸಿ ಹೊಟ್ಟೆಯಲ್ಲಿರುವ ಕಲ್ಮಶವನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಉತ್ಪಕರ್ಷಣ ನಿರೋಧಿಯಾಗಿ ಕೂಡ ಕಾರ್ಯನಿರ್ವಹಿಸುತ್ತದೆ ಜೊತೆಗೆ ಯಾವುದೇ ರೀತಿಯ ಕೆಟ್ಟ ಬ್ಯಾಕ್ಟೀರಿಯಾಗಳು ಹೊಟ್ಟೆಯಲ್ಲಿ ಬೆಳೆಯದಂತೆ ತಡೆಯುತ್ತದೆ. ತುಳಸಿ ಜ್ಯೂಸ್‌ ತಯಾರಿಸಿ ಪ್ರತಿನಿತ್ಯ ಕುಡಿಯುವುದರಿಂದ ಆರೋಗ್ಯ ಉತ್ತಮಗೊಳ್ಳುತ್ತದೆ.
 
- ಜೀರಿಗೆಯು ಹೊಟ್ಟೆಯ ಯಾವುದೇ ನೋವನ್ನು ಇದು ಉಪಚರಿಸುತ್ತದೆ. ಒಂದು ಕಪ್‌ ನೀರಿಗೆ ಜೀರಿಗೆ ಹಾಕಿ ಕುದಿಸಿ ಕುಡಿದರೆ ಒಳ್ಳೆಯದು.
 
- ಬ್ಯಾಕ್ಟೀರಿಯಾವನ್ನು ಕೊಲ್ಲುವಲ್ಲಿ ಕೊತ್ತಂಬರಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದೆ. ಫುಡ್‌ ಪಾಯ್ಸನ್‌ನಿಂದಾಗುವ ಅಡ್ಡ ಪರಿಣಾಮಗಳನ್ನು ಹೋಗಲಾಡಿಸುವ ಗುಣ ಕೊತ್ತಂಬರಿ ಸೊಪ್ಪು ಮತ್ತು ಬೀಜದಲ್ಲಿದೆ. ಕೊತ್ತಂಬರಿ ಸೊಪ್ಪು ಅಥವಾ  ಕೊತ್ತಂಬರಿ ಬೀಜವನ್ನು ದೈನಂದಿನ ಆಹಾರದಲ್ಲಿ ಬಳಸುವುದು ಉತ್ತಮ.
 
- ಬೆಳ್ಳುಳ್ಳಿ ರೋಗನಿರೋಧಕ, ಆ್ಯಂಟಿ ಬ್ಯಾಕ್ಟೀರಿಯಾ ಅಂಶಗಳನ್ನು ಒಳಗೊಂಡಿದ್ದು, ಭೇದಿ ಮತ್ತು ಹೊಟ್ಟೆ ನೋವಿಗೆ ರಾಮಬಾಣ ಮತ್ತು ಇದು ಫುಡ್ ಪಾಯಿಸನ್ ಉಂಟುಮಾಡುವ ಯಾವುದೇ ಲಕ್ಷಣಗಳನ್ನು ಹೊಗಲಾಡಿಸುತ್ತದೆ. ದೈನಂದಿನ ಆಹಾರದಲ್ಲಿ ಬೆಳ್ಳುಳ್ಳಿ ಸೇವಿಸಿದರೆ ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ