ಉರಿ ಮೂತ್ರವೇ? ಮೂತ್ರ ಸರಾಗವಾಗಲು ಮನೆ ಮದ್ದು ಏನೆಲ್ಲಾ ಇದೆ ಗೊತ್ತಾ?

ಶನಿವಾರ, 31 ಡಿಸೆಂಬರ್ 2016 (08:26 IST)
ಬೆಂಗಳೂರು: ಹೆಚ್ಚು ಖಾರದ ಆಹಾರ ಪದಾರ್ಥ ತಿಂದರೆ, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದರಿಂದಲೋ ಉರಿ ಮೂತ್ರವಾಗುತ್ತದೆ. ಅತೀವ ಉರಿ, ನೋವು ಆಗಾಗ ಮೂತ್ರ ವಿಸರ್ಜಿಸಬೇಕೆಂದು ಅನಿಸುವುದು ಇದರ ಲಕ್ಷಣಗಳು.

ಹಾಗಿದ್ದರೆ ಉರಿ ಮೂತ್ರವಾಗುವುದಕ್ಕೆ ಏನೇನು ಮಾಡಬೇಕು? ಇದಕ್ಕೆ ವೈದ್ಯರ ಬಳಿಗೆ ಓಡಬೇಕಿಲ್ಲ. ತಕ್ಷಣ ನಾವು ಮನೆಯಲ್ಲೇ ಇರುವ ಸಾಮಗ್ರಿಗಳನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು. ಅದು ಯಾವುದೆಲ್ಲಾ ನೋಡೋಣ.

·         ಎಳೆನೀರು ಸೇವಿಸುವುದು.
·         ಮೆಂತ್ಯದ ಕಾಳಿನ ಕಷಾಯ ಮಾಡಿ ಸೇವಿಸುವುದು ದೇಹಕ್ಕೂ ತಂಪು.
·         ಧನಿಯಾ ಕಾಳನ್ನು ನೆನೆ ಹಾಕಿ ಅದರ ನೀರು ಸೇವಿಸಬಹುದು.
·         ಎಳ್ಳಿನ ಕಾಳು ನೆನೆ ಹಾಕಿ ಖಾಲಿ ಹೊಟ್ಟೆಯಲ್ಲಿ ನೀರು ಸೇವಿಸಬಹುದು.
·         ಸಕ್ಕರೆ ಮತ್ತು ತುಪ್ಪವನ್ನು ಸೇರಿಸಿ ತಿನ್ನುವುದು ಸುಲಭ ಪರಿಹಾರ.
·         ಜೀರಿಗೆ ಕಷಾಯ ಮಾಡಿ ಸೇವಿಸಬಹುದು.
·         ಬಾರ್ಲಿ ನೀರಿನ ಸೇವನೆ.
·         ಕುಚ್ಚಿಲು ಅಕ್ಕಿ ಗಂಜಿ ನೀರನ್ನು ಸೇವಿಸಬಹುದು.
·         ಎಲ್ಲಕ್ಕಿಂತ ಮುಖ್ಯವಾಗಿ ಚೆನ್ನಾಗಿ ನೀರು ಕುಡಿಯಬೇಕು.
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ