ಮುಖದ ಸೌಂದರ್ಯ ಹೆಚ್ಚಿಸಲು ಬಳಸಿ ಸೇಬು ಹಣ್ಣಿನ ಫೇಸ್ ಪ್ಯಾಕ್
ಬುಧವಾರ, 6 ಜನವರಿ 2021 (07:39 IST)
ಬೆಂಗಳೂರು : ಸೇಬು ಆರೋಗ್ಯಕ್ಕೆ ತುಂಬಾ ಉತ್ತಮ. ದಿನಕ್ಕೆ ಒಂದು ಸೇಬು ಸೇವಿಸಿದರೆ ವೈದ್ಯರಿಂದ ದೂರವಿರಬಹುದು ಎಂದು ಹೇಳುತ್ತಾರೆ. ಅಂದ ಹಾಗೇ ಈ ಸೇಬುಹಣ್ಣಿನಿಂದ ಆರೋಗ್ಯ ಮಾತ್ರವಲ್ಲ, ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು.
ಸೇಬು ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಮೈಕ್ರೊಬಿಯಲ್ ಗುಣಗಳಿವೆ. ಇದು ಮುಖದ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಹಾಗಾಗಿ ತುರಿದ ಸೇಬು ಹಣ್ಣಿಗೆ ರೋಸ್ ವಾಟರ್ ಮತ್ತು ತಾಜಾ ದಾಳಿಂಬೆ ರಸ 1 ಚಮಚ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಒಣಗಲು ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ. ಇದನ್ನು ವಾರಕ್ಕೆರಡು ಬಾರಿ ಮಾಡಿ.