ಬೀಟ್‌ರೂಟ್ ಬಳಸಿ ಆರೋಗ್ಯ ಹೆಚ್ಚಿಸಿ

ಮಂಗಳವಾರ, 19 ಜೂನ್ 2018 (13:47 IST)
ಪೋಟೀನ್, ಫಾಸ್ಪರಸ್, ಜಿಂಕ್, ಮ್ಯಾಂಗನೀಸ್, ಮ್ಯಾಗ್ನೇಷಿಯಂ, ಪೊಟ್ಯಾಷಿಯಂ, ಕಬ್ಬಿಣ, ಜೀವಸತ್ವ ಬಿ6, ತಾಮ್ರ ಹಾಗೂ ನಾರಿನ ಹೇರಳವಾದ ಅಂಶಗಳನ್ನು ಹೊಂದಿರುವ ಬೀಟ್‌ರೂಟ್‌ನಿಂದ ನಮ್ಮ ಆರೋಗ್ಯಕ್ಕಾಗುವ ಲಾಭಗಳನ್ನು ನೋಡೋಣ
* ರಕ್ತ ಹೀನತೆ ಸಮಸ್ಯೆಗೆ ಪ್ರತಿನಿತ್ಯ ಬೀಟ್ ರೂಟ್ ಸೇವನೆ ಮಾಡುವುದರಿಂದ ದೇಹದಲ್ಲಿ ರಕ್ತಕಣಗಳು ಹೆಚ್ಚಾಗಿ ರಕ್ತಹೀನತೆ ಸಮಸ್ಯೆ ಕಡಿಮೆಯಾಗುವುದು.
 
* ಬೀಟ್‌ರೂಟ್‌ನಲ್ಲಿ ರಕ್ತ ಶುದ್ಧೀಕರಿಸುವ ಅಂಶ ಹೆಚ್ಚಿದೆ. ಅಲ್ಲದೆ ಇದರಲ್ಲಿ ವಿಟಮಿನ್ ಸಿ ಅಂಶವೂ ಇದೆ. ಹೀಗಾಗಿ ಇದು ಚರ್ಮದ ಕಾಂತಿ ವೃದ್ಧಿಗೆ ಉತ್ತಮ.
 
* ಕ್ಯಾಲ್ಶಿಯಂ ಕೊರತೆಯನ್ನು ನೀಗಿಸಿ ಮೂಳೆಗಳನ್ನು ಧೃಡಗೊಳಿಸುತ್ತದೆ
 
* ಬಿಸಿಮಾಡಿದ ಎಳ್ಳೆಣ್ಣೆಗೆ ಅರ್ಧಚಮಚ ಬೀಟ್‌ರೂಟ್‌ ಪೇಸ್ಟ್ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಬೇಕು. ತಣ್ಣಗಾದ ನಂತರ ಇದನ್ನು ಗಾಯದ ಕಲೆಗಳಿಗೆ ನಿರಂತರವಾಗಿ ಹಚ್ಚಿದಾಗ ಕಲೆಗಳು ನಿಧಾನವಾಗಿ ಕಡಿಮೆಯಾಗುತ್ತದೆ.
 
* ಇದರಲ್ಲಿ ಫೈಬರ್ ಅಂಶವೂ ಹೇರಳವಾಗಿರುವುದರಿಂದ ಜೀರ್ಣಕ್ರಿಯೆಗೂ ಒಳ್ಳೆಯದು. ಅಲ್ಲದೆ, ಮಲಬದ್ಧತೆ ಇರುವವರಿಗೂ ಇದರ ಸೇವನೆ ಉತ್ತಮ.
 
* ಅರ್ಧ ಗ್ಲಾಸ್ ಬೀಟ್‌ರೂಟ್‌ ರಸ, ಅರ್ಧನಿಂಬೆಹಣ್ಣಿನ ರಸ ಹಾಗೂ ಒಂದುಚಮಚ ಜೇನು ತುಪ್ಪವನ್ನು ಮಿಶ್ರಣಮಾಡಿ ಪ್ರತಿದಿನ ಬೆಳಿಗ್ಗೆ ಹಸಿದ ಹೊಟ್ಟೆಯಲ್ಲಿ ಸೇವಿಸುತ್ತ ಬಂದಲ್ಲಿ ಬೊಜ್ಜು ಕರಗುತ್ತದೆ.
 
* ಬೀಟ್‌ರೂಟ್‌ ಹೃದಯ ರೋಗ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಬೀಟ್ ರೂಟ್ನಲ್ಲಿನ ಫೈಬರ್ ಪ್ರಸ್ತುತ ಕೊಲೆಸ್ಟ ಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್, ಎಚ್ ಡಿ ಎಲ್ ಕೊಲೆಸ್ಟ್ರಾಲ್‌ಗಳನ್ನು ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ.
 
* ಬೀಟ್‌ರೂಟ್‌ ಸ್ನಾಯುಗಳನ್ನು ಹೆಚ್ಚು ಇಂಧನ-ಸಮರ್ಥವಾಗಿ ಮಾಡುತ್ತದೆ. ಇದರಿಂದಾಗಿ ದೇಹದ ಶಕ್ತಿ ಹೆಚ್ಚುತ್ತದೆ
 
* ದೇಹದಿಂದ ಜೀವಾಣು ತೊಡೆದುಹಾಕಲು ಮತ್ತು ನಿಮ್ಮ ದೇಹವನ್ನು ನಿರ್ವಿಷಗೊಳಿಸುತ್ತದೆ.
 
* ಫೋಲೇಟ್, ಫೈಬರ್ ಮತ್ತು ಬೆಟಾಲೈನ್‌ಗಳನ್ನು ಹೊಂದಿರುವ ಬೀಟ್ರೂಟ್ ಉರಿಯೂತವನ್ನು ಕಡಿಮೆ ಮಾಡುತ್ತದೆ. 
 
* ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್‌ಗಳು, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಬೀಟೈನ್‌ಗಳನ್ನು ಒಳಗೊಂಡಿರುವ ಕಾರಣ ಬೀಟ್‌ರೂಟ್‌ ಯಕೃತ್ತಿನ ಆರೋಗ್ಯವನ್ನು ಸುಧಾರಿಸುತ್ತದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ