ನಿಮ್ಮ ಚರ್ಮದ ಸತ್ತ ಕೋಶಗಳನ್ನು ತೆಗೆದು ಚರ್ಮ ಮೃದುವಾಗಿಸಲು ಇದನ್ನು ಬಳಸಿ

ಭಾನುವಾರ, 20 ಅಕ್ಟೋಬರ್ 2019 (06:49 IST)
ಬೆಂಗಳೂರು : ಸನ್ ಬರ್ನ್ ಗಳಿಂದ ಅಥವಾ ಇನ್ನಿತರ ಕಾರಣಗಳಿಂದ ನಿಮ್ಮ ಚರ್ಮದ ಕೋಶಗಳು ಸತ್ತು ಚರ್ಮ ಒರಟಾಗಿ ಕಪ್ಪಾಗಿ ಕಾಣುತ್ತದೆ. ಈ ಸತ್ತ ಚರ್ಮಗಳು ನಿವಾರಣೆಯಾದರೆ ನಿಮ್ಮ ಚರ್ಮ ಮೃದುವಾಗಿ ಸುಂದರವಾಗಿ ಕಾಣುತ್ತದೆ. ಅದಕ್ಕಾಗಿ ಇದನ್ನು ಬಳಸಿ




ಕಪ್ಪಾಗಿ ಕಾಣುವಂತಹ ಚರ್ಮದ ಸತ್ತ ಕೋಶಗಳನ್ನು ತೆಗೆಯುವಲ್ಲಿ ಅಡುಗೆ ಸೋಡಾವು ಪ್ರಮುಖ ಪಾತ್ರ ವಹಿಸುವುದು. ತೆಂಗಿನೆಣ್ಣೆಯು ಆಳವಾಗಿ ಪೋಷಣೆ ಹಾಗೂ ಮೊಶ್ಚಿರೈಸ್ ಮಾಡುವುದು.


ಒಂದು ಪಿಂಗಾಣಿಯಲ್ಲಿ ¼ ಕಪ್ ಅಡುಗೆ ಸೋಡಾ ಮತ್ತು ½ ಕಪ್ ತೆಂಗಿನೆಣ್ಣೆ ಹಾಕಿಕೊಳ್ಳಿ. ತೆಂಗಿನೆಣ್ಣೆಯು ದ್ರವ ರೂಪದಲ್ಲಿದ್ದರೆ ಇದನ್ನು ಸ್ವಲ್ಪ ಬಿಸಿ ಮಾಡಿ ಬಳಸಿಕೊಳ್ಳಿ. ಎರಡನ್ನು ಸರಿಯಾಗಿ ಮಿಶ್ರ ಮಾಡಿ. ಇದನ್ನು ನಿಮ್ಮ ಕೈಕಾಲುಗಳಿಗೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಸುಮಾರು 30 ಸೆಕೆಂಡುಗಳ ಕಾಲ ಸ್ಕ್ರಬ್ ಮಾಡಿಕೊಳ್ಳಿ. ಕೆಲವು ನಿಮಿಷಗಳ ಕಾಲ ಹಾಗೆ ಬಿಡಿ. ಅಂತಿಮವಾಗಿ ಉಗುರುಬೆಚ್ಚಗಿನ ನೀರು ಬಳಸಿಕೊಂಡು ಸ್ಕ್ರಬ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ