ಎದೆನೋವು ಕಾಣಿಸಿಕೊಂಡರೆ ತಕ್ಷಣ ಈ ಮನೆಮದ್ದನ್ನು ಬಳಸಿ

ಶುಕ್ರವಾರ, 27 ಸೆಪ್ಟಂಬರ್ 2019 (17:32 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಎದೆನೋವು ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ಈ ಮನೆಮದ್ದನ್ನು ಬಳಸಿದರೆ ಕೂಡಲೇ ಎದೆನೋವಿನಿಂದ ಮುಕ್ತಿಹೊಂದಬಹುದು.




* ಕೊತ್ತಂಬರಿ ಸೊಪ್ಪನ್ನು ಎಳೆನೀರಿನೊಂದಿಗೆ ರುಬ್ಬಿ, ಕಲ್ಲುಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ದಿನವೂ ಒಂದು ಬಾರಿ ಸೇವಿಸುತ್ತಿದ್ದರೆ ಎದೆನೋವು ಕಡಿಮೆ ಆಗುವುದು.


* ಕೊತ್ತಂಬರಿ ಬೀಜವನ್ನು ಕುಟ್ಟಿ ಪುಡಿ ಮಾಡಿ ಅದನ್ನು ನೀರಿನಲ್ಲಿ ನೆನೆಹಾಕಬೇಕು. ಅದನ್ನು ಅದನ್ನು ಮಿಕ್ಸ್ ಮಾಡಿ  ಸೋಸಬೇಕು. ಈ ಕಷಾಯಕ್ಕೆ ಹಾಲು, ಸಕ್ಕರೆ ಬೆರೆಸಿ ಸೇವಿಸಿದರೆ ಆಗಾಗ ಕಾಡುವ ಎದೆ ನೋವು ಕಡಿಮೆಯಾಗುತ್ತದೆ.


* ಎಳೆಯ ಸೀಬೆಕಾಯಿಯ ಕಷಾಯವನ್ನು ಸಿದ್ಧಪಡಿಸಬೇಕು. ಇದನ್ನು ಮಜ್ಜಿಗೆಯೊಂದಿಗೆ ಮಿಶ್ರಣ ಮಾಡಿ ಕುಡಿದರೆ ಎದೆ ನೋವು ತಕ್ಷಣ ಕಡಿಮೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ