ಬೆಂಗಳೂರು : ದೇಹದಲ್ಲಿ ಪಿತ್ತ ಅಧಿಕವಾದಾಗ ಆರೋಗ್ಯ ಸಮಸ್ಯೆ ಕಾಡುತ್ತದೆ. ಈ ಪಿತ್ತ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ.
ಪಿತ್ತದ ಸಮಸ್ಯೆಯಿಂದ ವಾಕರಿಕೆ ಬರುತ್ತಿರುತ್ತದೆ. ವಾಂತಿಯಾಗುತ್ತಿರುತ್ತದೆ, ತಲೆನೋವು, ಹೀಗೆ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಈ ಪಿತ್ತದ ಸಮಸ್ಯೆ ನಿವಾರಣೆಯಾಗಲು ಹಾಗೂ ಪಿತ್ತ ಕಡಿಮೆಯಾಗಲು ಬಸಳೆ ಸೊಪ್ಪಿನ ಬೇರನ್ನು ನೀರಿನೊಂದಿಗೆ ಕುದಿಸಿ. ಈ ಕಷಾಯವನ್ನು ಬೆಳಿಗ್ಗೆ ಹಾಗೂ ಸಂಜೆ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತ ಬಂದರೆ ಪಿತ್ತ ಕಡಿಮೆಯಾಗುತ್ತದೆ.