ನಿಮ್ಮ ತ್ವಚೆಯ ಕಾಂತಿ ಹೆಚ್ಚಾಗಲು ಈ ಸ್ನಾನದ ಪುಡಿ ಬಳಸಿ

ಬುಧವಾರ, 16 ಜನವರಿ 2019 (14:10 IST)
ಬೆಂಗಳೂರು : ಕೆಮಿಕಲ್ ಯುಕ್ತ ಬಾತ್ ಸೋಪ್ ಗಳನ್ನು ಬಳಸಿ ಸ್ಕೀನ್ ಹಾಳು ಮಾಡಿಕೊಳ್ಳುವ ಬದಲು ಮನೆಯಲ್ಲಿ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಸಿ ಸ್ನಾನದ ಪುಡಿಗಳನ್ನು ತಯಾರಿಸಿ ಬಳಸಿದರೆ ನಿಮ್ಮ ತ್ವಚೆಯ ಕಾಂತಿ ಹೆಚ್ಚಾಗುತ್ತದೆ. ಮನೆಯಲ್ಲಿ ಸ್ನಾನದ ಪುಡಿ ತಯಾರಿಸುವುದು ಹೇಗೆಂದು ತಿಳಿಯೋಣ.


ಉದ್ದಿನ ಬೇಳೆ 50 ಗ್ರಾಂ, ಅಗಸೆ ಬೀಜ 50 ಗ್ರಾಂ ಇವೆರಡನ್ನು  ತೆಗೆದುಕೊಂಡು  ಬೇರೆ ಬೇರೆಯಾಗಿ  ಹುರಿದು ಪುಡಿ ಮಾಡಿಕೊಳ್ಳಿ ಅದರ ಜೊತೆಗೆ  ಪಿಪ್ಪಲಿ ಚೂರ್ಣ 50ಗ್ರಾಂ, ಗೋಧಿ ಹಿಟ್ಟು 50ಗ್ರಾಂ ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಒಂದು ಗಾಜಿನ ಬಾಟಲ್ ನಲ್ಲಿ ಸ್ಟೋರ್ ಮಾಡಿ ಇಡಿ.


ಈ ಪುಡಿಯನ್ನು ಸ್ನಾನ ಮಾಡುವ ಅರ್ಧಗಂಟೆ ಮೊದಲು ಹಸುವಿನ ತುಪ್ಪದ ಜೊತೆ ಮಿಕ್ಸ್ ಮಾಡಿ  ಪೇಸ್ಟ್ ಮಾಡಿಕೊಂಡು ದೇಹಕ್ಕೆ ಹಚ್ಚಿಕೊಂಡು ಮಸಾಜ್ ಮಾಡಿ ಅರ್ಧಗಂಟೆ ಬಿಟ್ಟು ಸ್ನಾನ ಮಾಡಿ. ಆದರೆ ಸೋಪ್ ಬಳಸಬಾರದು ಅದರ ಬದಲು ಕಡಲೆಹಿಟ್ಟನ್ನು ಬಳಸಿ. ಇದರಿಂದ ನಿಮ್ಮ ತ್ವಚೆಯ ಕಾಂತಿ ಹೆಚ್ಚಾಗುತ್ತದೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ