ನುಗ್ಗೆ ಸೊಪ್ಪಿನಲ್ಲಿ ಕಬ್ಬಿನಾಂಶ ಹಾಗೂ ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ಇದನ್ನು ನಮ್ಮ ಆಹಾರದಲ್ಲಿ ಬಳಸುವುದರಿಂದ ಆರೋಗ್ಯದ ಮೇಲೆ ಭಾರೀ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ನುಗ್ಗೆ ಸೊಪ್ಪನ್ನು ಸೇವನೆ ಮಾಡುವುದರಿಂದ ಮೂಳೆಗಳನ್ನು ಬಲಪಡಿಸುವುದು, ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಲ್ಲಿ. ರಕ್ತದೊತ್ತಡವನ್ನು ಕಡಿಮೆ ಮಾಡಲು ತುಂಬಾನೇ ಒಳ್ಳೆಯದು. ಹಾಲುಣಿಸುವ ತಾಯಂದಿರಿಗೆ ಮತ್ತು ಮಧುಮೇಹಿಗಳಿಗೂ ಇದು ತುಂಬಾನೇ ಒಳ್ಳೆಯದು.
ಇನ್ನೂ ನುಗ್ಗೆ ಸೊಪ್ಪಿನಿಂದ ಸಾಂಬಾರ್ ಹಾಗೂ ಪಲ್ಯದ ರೀತಿಯಲ್ಲಿ ಸೇವನೆ ಮಾಡಿ ಬೇಜಾರಾಗಿದ್ರೆ ನಾನ್‌ವೆಜ್ ಪ್ರಿಯರು ಮೊಟ್ಟೆ ಜತೆ ಬುರ್ಜಿ ಮಾಡಿ ಸವಿಯಬಹುದು. ತುಂಬಾನೇ ರುಚಿಯಾಗಿರುತ್ತದೆ. ಈ ಪಲ್ಯವನ್ನು ಅನ್ನ, ರೊಟ್ಟಿ ಜತೆ ಸವಿಯಬಹುದು.
ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಅದಕ್ಕೆ ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಅದಕ್ಕೆ ಕರಿಬೇವು, ಶುಂಠಿ ಬೆಳ್ಳುಳ್ಳಿ, ಕಾಯಿಮೆಣಸು ಸೇರಿಸಿ ಬಾಡಿಸಿಕೊಂಡ ಮೇಲೆ ಟೊಮೆಟೊ ಸೇರಿಸಿದ್ಮೇಲೆ, ಉಪ್ಪು ಹಾಕಿ. ಟೊಮೆಟೋ ಫ್ರೈ ಆದಮೇಲೆ ತೊಳೆದಿಟ್ಟ ನುಗ್ಗೆಸೊಪ್ಪನ್ನು ಚೆನ್ನಾಗಿ ಫ್ರೈ ಮಾಡಿ. ಎಲ್ಲ ಮಿಶ್ರಣ ಬೆಂದ ನಂತರ, ಬೇಕಾದಷ್ಟು ಮೊಟ್ಟೆಯನ್ನು ಹಾಕಿ, ಬುರ್ಜಿ ಹದಕ್ಕೆ ಫ್ರೈ ಮಾಡಿ.
ಇದೀಗ ರುಚಿಕರವಾದ ನುಗ್ಗೆ ಸೊಪ್ಪಿನ ಎಗ್ ಬುರ್ಚಿ ಸವಿಯಲು ಸಿದ್ದ. ತಿನ್ನಲು ರುಚಿಕರವಾಗಿಯೂ ಇರುತ್ತದೆ, ಆರೋಗ್ಯಕ್ಕೂ ತುಂಬಾನೇ ಉತ್ತಮ.