*ಕೆಲವರಿಗೆ ನಿದ್ರೆಯಲ್ಲಿ ನಡೆಯುವ ಅಭ್ಯಾಸವಿರುತ್ತದೆ. ಇದು ವಯಸ್ಕರಿಗಿಂತಲೂ ಚಿಕ್ಕಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ನಿದ್ರೆಯ ಕೊರತೆ ಅಥವಾ ಒತ್ತಡದ ಪರಿಣಾಮದಿಂದ ಇದು ಉಂಟಾಗುತ್ತದೆ. ವ್ಯಕ್ತಿಗೆ ತಾನು ನಡೆಯುತ್ತಿರುವುದರ ಬಗ್ಗೆ ಅರಿವು ಇರುವುದಿಲ್ಲ. ಆದ್ದರಿಂದ ಈ ಸಮಸ್ಯೆ ಅಪಾಯವನ್ನುಂಟುಮಾಡಬಹುದು.
*ಕೆಲವರು ನಿದ್ರೆಯಲ್ಲಿ ಹಲ್ಲು ಕಡಿಯುತ್ತಾರೆ. ಜಗತ್ತಿನ ಶೇ.30ರಷ್ಟು ಜನರು ಈ ತೊಂದರೆಯಿಂದ ಬಳಲುತ್ತಾರೆ. ಇದರಿಂದ ಹಲ್ಲುಗಳು ಸವೆಯುವುದು ಹೆಚ್ಚಾಗಿ ಅಸ್ಥಿರಜ್ಜುಗಳಲ್ಲಿ ಉರಿಯೂತ ಉಂಟಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಇದರಿಂದ ತಲೆನೋವು ಕೂಡ ಕಾಣಿಸಿಕೊಳ್ಳಬಹುದು.
*ಹಾಸಿಗೆಯಲ್ಲಿ ಚಿಕ್ಕ ಮಕ್ಕಳು ಮೂತ್ರ ಮಾಡಿಕೊಳ್ಳುವುದು ಸಾಮಾನ್ಯವಾದ ವಿಚಾರ. ಆದರೆ ಕೆಲವೊಮ್ಮೆ ವಯಸ್ಕರಲ್ಲಿಯೂ ಈ ಸಮಸ್ಯೆ ಕಂಡಬರುತ್ತದೆ. ರಾತ್ರಿಯ ವೇಳೆ ಆ್ಯಂಟಿ-ಡೈಯುರೇಟಿಕ್ ಹಾರ್ಮೋನ್ ಉತ್ಪಾದನೆಯಾಗುತ್ತದೆಯಲ್ಲದೆ ಇದು ಕೆಲವೊಮ್ಮೆ ಸೂಕ್ತ ಪ್ರಮಾಣದಲ್ಲಿ ಉತ್ಪಾದನೆಯಾಗದಿರಬಹುದು. ಕೆಲವೊಮ್ಮೆ ಮೂತ್ರಪಿಂಡಗಳು ಅದಕ್ಕೆ ಪ್ರತಿಕ್ರಿಯಿಸಲು ವಿಫಲವಾಗಬಹುದು. ಇದರಿಂದ ವ್ಯಕ್ತಿ ಹಾಸಿಗೆಯಲ್ಲೇ ಮೂತ್ರ ವಿಸರ್ಜಿಸುವ ಪ್ರಕರಣಗಳು ಕಂಡುಬರುತ್ತವೆ.
* ಹೆಚ್ಚಾಗಿ ಪುರುಷರು ನಿದ್ರೆಯ ವೇಳೆ ಗೊರಕೆ ಹೊಡೆಯುತ್ತಾರೆ. ವಯಸ್ಸಾದಂತೆ ಈ ತೊಂದರೆ ಮತ್ತಷ್ಟು ಹದಗೆಡಬಹುದು. ಅಲರ್ಜಿ ಅಥವಾ ಗಂಟಲಿನ ಸೋಂಕಿನ ನಂತರ ಗೊರಕೆಯ ತೊಂದರೆ ಕಾಣಿಸಿಕೊಳ್ಳಬಹುದು. ನಿದ್ರೆಗೆ ಇದು ಅಡ್ಡಿಯಾಗಬಹುದಲ್ಲದೆ ಶ್ವಾಸಕೋಶಗಳಿಗೆ ಗಾಳಿಯ ಹರಿವನ್ನು ಇದು ಸಂಪೂರ್ಣವಾಗಿ ತಡೆಯುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.