ಬೇಸಿಗೆಕಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡಲು ಈ ಪಾನೀಯಗಳನ್ನು ನೀಡಿ
ಮಂಗಳವಾರ, 30 ಏಪ್ರಿಲ್ 2019 (09:00 IST)
ಬೆಂಗಳೂರು : ಬೇಸಿಗೆ ಕಾಲದಲ್ಲಿ ಹೆಚ್ಚಿನವರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಅದರಲ್ಲೂ ಚಿಕ್ಕ ಮಕ್ಕಳ ಆರೋಗ್ಯ ಹದಗೆಡುವುದು ಜಾಸ್ತಿ. ಆದ್ದರಿಂದ ಬೇಸಿಗೆಯಲ್ಲಿ ಮಕ್ಕಳಿಗೆ ಕೆಲವೊಂದು ಆರೋಗ್ಯಕರ ಪಾನೀಯಗಳನ್ನು ನೀಡಿ ಅವರನ್ನು ಅನಾರೋಗ್ಯದಿಂದ ಕಾಪಾಡಿ.
ಎಳನೀರಿನಲ್ಲಿ ಮಿನರಲ್ಸ್ ಪ್ರಮಾಣ ಜಾಸ್ತಿ ಇರುತ್ತದೆ. ಮಕ್ಕಳಿಗೆ ನೀರಿನ ಬದಲು ದಿನದಲ್ಲಿ ಎರಡು ಬಾರಿ ಎಳನೀರನ್ನು ನೀಡಿ. ಬೇಸಿಗೆಯಲ್ಲಿ ಮಧ್ಯಾಹ್ನದ ವೇಳೆ ಮಕ್ಕಳಿಗೆ ಮನೆಯಲ್ಲೇ ತಯಾರಿಸಿದ ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿಯಲು ಕೊಡಿ. ಇದು ದೇಹವನ್ನು ತಂಪಾಗಿರಿಸುತ್ತದೆ.
ಬೇಸಿಗೆ ಕಾಲದಲ್ಲಿ ಉಷ್ಣಾಂಶ ಅಧಿಕವಾಗಿರುವುದರಿಂದ ಮಕ್ಕಳ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ. ಆದ್ದರಿಂದ ಅವರಿಗೆ ಸರಿಯಾಗಿ ನೀರನ್ನು ಕುಡಿಸಬೇಕು. ತಿಂಗಳಿಗೊಮ್ಮೆ ಹೆಸರು ಬೇಳೆ ಬೇಯಸಿ ಜ್ಯೂಸ್ ರೀತಿ ಮಾಡಿ ಕೊಡಬಹುದು. ಇದರಲ್ಲಿ ಪ್ರೋಟೀನ್ ಸಿಗುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.