ಕಲ್ಲಂಗಡಿ ಹಣ್ಣಿನ ಬೀಜದ ಗುಣ ಗೊತ್ತಾದರೆ ನೀವು ಬಿಸಾಕಲ್ಲ!

ಶುಕ್ರವಾರ, 17 ಮಾರ್ಚ್ 2017 (10:28 IST)
ಬೆಂಗಳೂರು: ಕಲ್ಲಂಗಡಿ ಹಣ್ಣು ತಿನ್ನುವಾಗ ಅದರ ಬೀಜವನ್ನು ಉಗಿದು ಬಿಡುತ್ತೇವೆ. ಆದರೆ ಅದು ನೀಡುವ ಆರೋಗ್ಯಕರ ಉಪಯೋಗಗಳನ್ನು ತಿಳಿದುಕೊಂಡರೆ ಉಗಿಯುವುದನ್ನು ಖಂಡಿತಾ ಬಿಡುತ್ತೀರಿ.

 

ಅಂತಹದ್ದೇನಿದೆ ಅದರಲ್ಲಿ ಎನ್ನುತ್ತೀರಾ? ಕಲ್ಲಂಗಡಿ ಹಣ್ಣಿನ ಜತೆ ಹಸಿಯಾಗಿ ತಿನ್ನಲು ಇಷ್ಟವಿಲ್ಲದಿದ್ದರೆ, ಒಣಗಿಸಿ ಕುರು ಕುರು ಎಂದು ಸವಿಯಬಹುದು.  ಇದರಲ್ಲಿ ಸೆಲೆನಿಯಂ, ಪೊಟೇಷಿಯಂ, ಝಿಂಕ್ ಅಂಶ ಜಾಸ್ತಿಯಿದೆ ಎಂದು ಸಂಶೋಧಕರು ಹೇಳುತ್ತಾರೆ.

 
ಇದನ್ನು ತಿನ್ನುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದಂತೆ. ಅಲ್ಲದೆ ರಕ್ತದೊತ್ತಡ ಏರೋದಿಲ್ಲ. ಜತೆಗೆ ದೇಹದ ರೋಗ ನಿರೋಧಕ ಶಕ್ತಿ ಇನ್ನಷ್ಟು ಜಾಸ್ತಿಯಾಗುತ್ತದಂತೆ.  ಇನ್ನು ಇದರಲ್ಲಿ ಶುಗರ್ ಲೆವೆಲ್ ನಿಯಂತ್ರಣದಲ್ಲಿಡುವ ಗುಣವಿರುವ ಕಾರಣ ಮಧುಮೇಹಿಗಳಿಗಂತೂ ಭಾರೀ ಒಳ್ಳೆಯದು ಅಂತಾರೆ.

 
ಹೀಗಾಗಿ ವಾರಕ್ಕೆರಡು ಬಾರಿ ತಲಾ ಅರ್ಧ ಚಮಚ ಕಲ್ಲಂಗಡಿ ಹಣ್ಣಿನ ಬೀಜ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು.  ಆದರೆ ನೆನಪಿಡಿ, ಬೇಯಿಸಿ, ಅಥವಾ ಫ್ರೈ ಮಾಡಿ ತಿನ್ನುವುದರಿಂದ ಪ್ರಯೋಜನವಿಲ್ಲ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ