ಬುದ್ಧಿಮತ್ತೆ ಚುರುಕುಗೊಳಿಸಲು ಉಪಾಯಗಳು

ಶನಿವಾರ, 18 ಫೆಬ್ರವರಿ 2017 (06:00 IST)
ಬೆಂಗಳೂರು: ನಮ್ಮ ಬುದ್ಧಿ ಚುರುಕಾಗಿರಬೇಕೆಂದು ಎಲ್ಲರೂ ಬಯಸುತ್ತೇವೆ. ಅದಕ್ಕಾಗಿ ಏನೇನೋ ಸರ್ಕಸ್ ಮಾಡುತ್ತೇವೆ. ಬುದ್ಧಿ ಮತ್ತೆ ಚುರುಕಾಗಿರಲು ಏನೇನು ಮಾಡಬೇಕು ನೋಡೋಣ.

 
ಸಮತೋಲಿತ ಆಹಾರ

ನಾವು ತಿನ್ನುವ ಆಹಾರ ನಮ್ಮ ಬುದ್ಧಿವಂತಿಕೆಯನ್ನು ನಿರ್ಧರಿಸುತ್ತದೆ. ಸಾಕಷ್ಟು ಹಣ್ಣು, ತರಕಾರಿ, ಮೀನು, ಬೇಳೆ ಕಾಳುಗಳ ಆಹಾರ ಸೇವಿಸಿ.

ನಿದ್ರೆ

ಉತ್ತಮ ನಿದ್ರೆ ಕೂಡಾ ಬುದ್ಧಿ ಚುರುಕುಗೊಳಿಸಲು ಸಹಕಾರಿ. ಉತ್ತಮ ನಿದ್ರೆ ಮೈ ಮನಕ್ಕೆ ಉತ್ಸಾಹ ತುಂಬುವುದಲ್ಲದೆ, ನೆನಪು ಮೆಲುಕು ಹಾಕಲು ಸಹಕರಿಸುತ್ತದೆ.

ಮಂಪರು

ಹಗಲು ಹೊತ್ತು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯುವುದರಿಂದ ನಾವು ಕಲಿತದ್ದನ್ನು ನೆನಪು ಮಾಡಿಕೊಳ್ಳಲು ಸುಲಭವಾಗುತ್ತದೆ.  ಇದು ಸಂಶೋಧನೆಗಳಿಂದಲೂ ದೃಡಪಟ್ಟ ಸಂಗತಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ