ಹೈ ಹೀಲ್ಡ್ ಚಪ್ಪಲಿ ಧರಿಸುತ್ತೀರಾ? ಹಾಗಿದ್ದರೆ ಎಚ್ಚರವಿರಲಿ!
ಹೈಹೀಲ್ಡ್, ಕೆಳಗೆ ಸೂಜಿ ಮೊನೆಯಂತಹ ತಳ ಭಾಗದ ಚಪ್ಪಲಿ ಧರಿಸುವುದು ಫ್ಯಾಶನ್ ಇರಬಹುದು. ಆದರೆ ಇಂತಹ ಚಪ್ಪಲಿ ಧರಿಸುವುದರಿಂದ ಆರ್ಥರೈಟಿಸ್, ಕೀಲು ನೋವಿನಂತಹ ಸಮಸ್ಯೆ ಬರುತ್ತದೆ ಎಂದು ಏಮ್ಸ್ ನ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಇಂತಹ ಚಪ್ಪಲಿಯನ್ನು ಸುದೀರ್ಘ ಸಮಯದವರೆಗೆ ಧರಿಸುವುದರಿಂದ ಕಾಲಿನ ಮೂಳೆಗೆ ಹಾನಿಯಾಗಬಹುದು. ಪರಿಣಾಮ ಆರ್ಥರೈಟಿಸ್ ನಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.