ಬೆಂಗಳೂರು : ನಾವು ಅಡುಗೆ ಮಾಡುವಾಗ ಬೇರೆ ಬೇರೆ ರೀತಿಯಾದ ಪಾತ್ರೆಗಳನ್ನು ಬಳಸುತ್ತೇವೆ. ಅಂದರೆ ಮಣ್ಣಿನ ಪಾತ್ರೆ, ಕಂಚು, ಹಿತ್ತಾಳೆ, ಅಲ್ಯೂಮಿನಿಯಂ ಹೀಗೆ ಹಲವು ಬಗೆಯ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸುತ್ತೇವೆ. ಆದರೆ ಇವುಗಳಲ್ಲಿ ಯಾವುದರಲ್ಲಿ ಆಹಾರ ಬೇಯಿಸಿ ತಿಂದರೆ ಆರೋಗ್ಯಕ್ಕೆ ಉತ್ತಮ ಎಂಬುದು ಹಲವರಿಗೆ ತಿಳಿದಿಲ್ಲ.ಅದಕ್ಕೆ ವಿವರ ಇಲ್ಲಿದೆ ನೋಡಿ.
ಮಣ್ಣಿನ ಮಡಿಕೆಯಲ್ಲಿ ಬೇಯಿಸಿದ ಆಹಾರವು ಶೇ.100ರಷ್ಟು ಪೋಷಕಾಂಶಗಳು ಹಾಗೆ ಇರುತ್ತವೆ.ಕಂಚಿನ ಪಾತ್ರೆಯಲ್ಲಿ ಬೇಯಿಸಿದ ಆಹಾರವು ಶೇ. 97 ರಷ್ಟು ಪೋಷಕಾಂಶಗಳು ಹಾಗೆ ಇರುತ್ತವೆ.ಹಿತ್ತಾಳೆ ಪಾತ್ರೆಯಲ್ಲಿ ಬೇಯಿಸಿದ ಆಹಾರವು ಶೇ.93ರಷ್ಟು ಪೋಷಕಾಂಶಗಳು ಹಾಗೆ ಇರುತ್ತವೆ. ಅಲ್ಯೂಮಿನಿಯಮ್ ,ಕುಕ್ಕರ್ ಗಳಲ್ಲಿ, ಬೇಯಿಸಿದರೆ 7-13 ರಷ್ಟು ಮಾತ್ರವೇ ಇರುತ್ತವೆ. ಆದರೂ ಅಲ್ಯುಮಿನಿಯಮ್ ಪಾತ್ರೆಗಳಂತಹವುಗಳಲ್ಲಿ ಬೇಯಿಸಿದ ಆಹಾರವನ್ನು ತಿನ್ನುವುದರಿಂದ ಮದುಮೇಹ, ಕೀಲುಗಳ ನೋವು, ಹೊಟ್ಟೆ ಸಂಬಂಧಿ ಕಾಯಿಲೆಗಳು, ಬೇಗ ಮುದುಕರಾಗುವುದು, ಮುಂತಾದ ಅಡ್ಡ ಪರಿಣಾಮಗಳು ಸಂಭವಿಸುತ್ತವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ