ಸ್ನಾನ ಮಾಡುವಾಗ ಹೊಕ್ಕುಳ ಸ್ವಚ್ಛ ಮಾಡದೇ ಇದ್ದರೆ ಏನಾಗುತ್ತದೆ

Krishnaveni K

ಶನಿವಾರ, 1 ಜೂನ್ 2024 (11:12 IST)
ಬೆಂಗಳೂರು: ಸ್ನಾನ ಮಾಡುವಾಗ ಕೆಲವೊಂದು ಅಂಗಗಳನ್ನು ಸರಿಯಾಗಿ ಸ್ವಚ್ಛಮಾಡಲೇಬೇಕು. ಇಲ್ಲದೇ ಹೋದರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಂತಹ ಒಂದು ಅಂಗಗಳಲ್ಲಿ ಹೊಕ್ಕುಳ ಭಾಗವೂ ಒಂದು.

ಸಾಮಾನ್ಯವಾಗಿ ಸ್ನಾನ ಮಾಡುವಾಗ ನಾವು ಮೈ, ಕೈಗಳನ್ನು ಚೆನ್ನಾಗಿ ಸೋಪ್ ಹಾಕಿ ಉಜ್ಜಿ ಉಜ್ಜಿ ಸ್ವಚ್ಛ ಮಾಡುತ್ತೇವೆ. ಆದರೆ ಕೆಲವರು ಹೊಕ್ಕುಳ ಭಾಗ, ಕಿವಿ ಸರಿಯಾಗಿ ಸ್ವಚ್ಛ ಮಾಡುವುದನ್ನೇ ಮರೆತುಬಿಡುತ್ತಾರೆ. ಅಥವಾ ಹೊಕ್ಕುಳ ಭಾಗ ಸ್ವಚ್ಛ ಮಾಡುವುದನ್ನು ಅಲಕ್ಷ್ಯ ಮಾಡುತ್ತಾರೆ.

ಹೊಕ್ಕುಳ ಭಾಗದಲ್ಲಿ ಪ್ರತ್ಯೇಕವಾಗಿ ಸ್ವಚ್ಛ ಮಾಡುವುದು ಏನಿದೆ ಎಂಬ ಉಡಾಫೆಯಿರುತ್ತದೆ. ಆದರೆ ಈ ಭಾಗವನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಇದ್ದರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸ್ನಾನ ಮಾಡುವಾಗ ಬೆರಳಾಡಿಸಿ ಈ ಜಾಗದಲ್ಲಿ ಸೋಪ್ ನೀರಿನ ಅಂಶ ಉಳಿದುಕೊಂಡಿದ್ದರೆ, ಬೆವರಿನ ಅಂಶವಿದ್ದರೆ ಚೆನ್ನಾಗಿ ಬೆರಳಾಡಿಸಿ ಸ್ವಚ್ಛ ಗೊಳಿಸಬೇಕು.

ಇಲ್ಲದೇ ಹೋದರೆ ಸೋಂಕಿನಿಂದ ತುರಿಕೆ, ನೋವು, ಊತವಾಗುವುದು ಇಲ್ಲವೇ ಸೋರುವಿಕೆ ಸಮಸ್ಯೆಯಾಗಬಹುದು. ಹೀಗಾಗಿ ಪ್ರತೀ ಬಾರಿ ಸ್ನಾನ ಮಾಡುವಾಗಲೂ ಹೊಕ್ಕುಳ ಭಾಗವನ್ನು ತೊಳೆದುಕೊಂಡು ಬಳಿಕ ಬಟ್ಟೆಯಿಂದ ಚೆನ್ನಾಗಿ ಒರೆಸಿ ಸ್ವಚ್ಛ ಮಾಡಬೇಕು ಎಂದು ಆರೋಗ್ಯ ತಜ್ಞರೇ ಹೇಳುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ