ಉಗುರು ಕಡಿಯುವ ಅಭ್ಯಾಸವಿದೆಯಾ? ಹಾಗಿದ್ದರೆ ಎಚ್ಚರಿಕೆಯಿಂದಿರಿ

Krishnaveni K

ಶುಕ್ರವಾರ, 24 ಮೇ 2024 (13:21 IST)
ಬೆಂಗಳೂರು: ಕೆಲವರಿಗೆ ಉಗುರು ಕಡಿಯುವ ಅಭ್ಯಾಸವಿರುತ್ತದೆ. ಇದರಿಂದ ಕೈ ಬೆರಳುಗಳು ಅಸಹ್ಯವಾಗಿ ಕಾಣುತ್ತದೆ. ಉಗುರು ಕಡಿಯುವ ಅಭ್ಯಾಸ ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಲ್ಲ. ಇದರಿಂದ ಏನೆಲ್ಲಾ ಅಡ್ಡಪರಿಣಾಮಗಳಾಗಬಹದು ಎಂದು ನೋಡಿ.

ಆತಂಕ, ಉದ್ವೇಗ, ಮಾನಸಿಕ ಒತ್ತಡದ ಸಮಸ್ಯೆಯಿರುವವರು ಈ ರೀತಿ ಉಗುರು ಕಡಿಯುವುದನ್ನು ತನ್ನಿಂದ ತಾನಾಗಿಯೇ ಅಭ್ಯಾಸ ಮಾಡಿಕೊಳ್ಳುತ್ತಾರೆ. ಇದೊಂದು ಚಟವಾಗಿ ಬಿಡುತ್ತದೆ. ಇದನ್ನು ಬಿಡಿಸಲೂ ಕಷ್ಟವಾಗಬಹುದು. ಅಥವಾ ಏಕಾಂಗಿತನ, ಬೇಸರ ಕಳೆಯಲು ಉಗುರು ಕಡಿಯುವ ಅಭ್ಯಾಸ ಮಾಡಿಕೊಂಡುಬಿಡುತ್ತಾರೆ.

ಆದರೆ ನಮ್ಮ ಉಗುರುಗಳಲ್ಲಿ ಅನೇಕ ಸೋಂಕುಗಳು, ವೈರಾಣುಗಳು ಇರಬಹುದು. ಇದು ಹಲ್ಲುಗಳ ಸಮಸ್ಯೆ, ಫಂಗಲ್ ಸೋಂಕುಗಳು, ಬ್ಯಾಕ್ಟೀರಿಯಾ ಮೂಲಕ ಬರುವ ರೋಗಗಳು, ಚರ್ಮದ ಸೋಂಕು, ಕೀವು ಮುಂತಾದ ಸಮಸ್ಯೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ.

ಉಗುರು ಕಡಿಯುವ ಅಭ್ಯಾಸದಿಂದಾಗಿ ಕೆಲವೊಮ್ಮೆ ಉಗುರಿನ ಸುತ್ತ ಚರ್ಮ ಕಿತ್ತು ಕೀವಾಗುವುದು, ಗಾಯವಾಗುವುದು ಅಥವಾ ಊದಿಕೊಳ್ಳುವ ಸಮಸ್ಯೆಗಳು ಬರಬಹುದು. ಇದೊಂದು ಚಟವಾದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಉಗುರು ಕಡಿಯುವ ಚಟ ಬಿಡಲು ಸಲಹೆ ಅಥವಾ ಪರಿಹಾರ ಕಂಡುಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ