ಯಾವ ವಯಸ್ಸಿನಲ್ಲಿ ಗರ್ಭಿಣಿಯಾದರೆ ಒಳ್ಳೆಯದು?

ಮಂಗಳವಾರ, 9 ಜನವರಿ 2018 (08:32 IST)
ಬೆಂಗಳೂರು: ಮದುವೆಯಾದ ಮಹಿಳೆಗೆ ದೊಡ್ಡ ಚಿಂತೆ ಇದುವೇ. ಫ್ಯಾಮಿಲಿ ಪ್ಲಾನಿಂಗ್ ಎಷ್ಟು ದಿನ ಮಾಡಬೇಕು? ಯಾವಾಗ ಮಕ್ಕಳಾದರೆ ಒಳ್ಳೆಯದು ಎಂದು. ಇದಕ್ಕೆ ಇಲ್ಲಿದೆ ಒಂದು ಸಲಹೆ.
 

20 ಕ್ಕಿಂತ ಮೊದಲು
ಸಾಮಾನ್ಯವಾಗಿ ಇತ್ತೀಚೆಗಿನ ದಿನಗಳಲ್ಲಿ 20 ವರ್ಷವಾದ ಮೇಲೆಯೇ ಯುವತಿಯರು ಮದುವೆಯಾಗುತ್ತಾರೆ. ಒಂದು ವೇಳೆ 20 ವರ್ಷಕ್ಕಿಂತ ಮೊದಲೇ ಮದುವೆಯಾಗಿದ್ದರೆ ಕನಿಷ್ಠ ಅಷ್ಟರವರೆಗಾದರೂ ಪ್ಲಾನಿಂಗ್ ಮಾಡಿಕೊಳ್ಳುವುದು ಒಳ್ಳೆಯದು. 20 ವರ್ಷಕ್ಕಿಂತ ಮೊದಲು ಗರ್ಭಿಣಿಯಾಗುವುದು ಮಹಿಳೆ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

20 ರಿಂದ 25
ಇದು ಗರ್ಭಿಣಿಯಾಗಲು ಹೇಳಿ ಮಾಡಿಸಿದ ವಯಸ್ಸು. ಈ ಸಮಯದಲ್ಲಿ ಪುರುಷನ ವೀರ್ಯಾಣುವೂ ಆರೋಗ್ಯವಂತವಾಗಿರುತ್ತದೆ. ಮಹಿಳೆಯ ದೇಹವೂ ಇನ್ನೊಂದು ಜೀವ ಹೊರುವಷ್ಟು ಸಶಕ್ತವಾಗಿರುತ್ತದೆ.

30 ರ ಮೇಲೆ
30 ವರ್ಷ ದಾಟಿದ ಮೇಲೆ ಮಕ್ಕಳ ಮಾಡಿಕೊಳ್ಳುವುದು ಒಳ್ಳೆಯ ಆಲೋಚನೆ ಅಲ್ಲ ಎನ್ನುತ್ತಾರೆ ವೈದ್ಯರುಗಳು. ಮಹಿಳೆಗೆ ವಯಸ್ಸು 30 ದಾಟಿದ ಮೇಲೆ ಜೀನ್ ಗಳೂ ಅಷ್ಟೊಂದು ಆರೋಗ್ಯವಂತವಾಗಿರುವುದಿಲ್ಲ. 30 ಕ್ಕಿಂತ ಮೊದಲೇ ಮಕ್ಕಳಾದರೆ ತಾಯಿ, ಮಗು ಇಬ್ಬರೂ ಆರೋಗ್ಯವಾಗಿರುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ