ಬೆಂಗಳೂರು: ಪ್ರತಿನಿತ್ಯ ಹಾಲು ಕುಡಿದರೆ ನಮ್ಮ ಆರೋಗ್ಯ ವೃದ್ಧಿಸುತ್ತದೆ ಎಂಬ ನಂಬಿಕೆ ನಮ್ಮದು. ಆದರೆ ಆಯುರ್ವೇದದ ಪ್ರಕಾರ ಹಾಲು ಕುಡಿಯುವುದಕ್ಕೂ ನಿರ್ದಿಷ್ಟ ಸಮಯ ಎನ್ನುವುದು ಇರುತ್ತದೆ.
ಹಾಲು ಸೇವಿಸುವುದು ಎಷ್ಟು ಮುಖ್ಯವೋ ಯಾವಾಗ ಸೇವಿಸುತ್ತೇವೆ ಎನ್ನುವುದೂ ಮುಖ್ಯ ಎಂದು ಆಯುರ್ವೇದ ಹೇಳುತ್ತದೆ. ತಜ್ಞರ ಪ್ರಕಾರ ಹಾಲು ಸೇವಿಸಲು ರಾತ್ರಿ ಮಲಗುವ ಮುನ್ನ ಸರಿಯಾದ ಸಮಯ.
ಹಾಗಿದ್ದರೂ ದೇಹ ದಾರ್ಡ್ಯ ಬೆಳೆಸಬೇಕೆಂಬ ಆಲೋಚನೆ ಇದ್ದರೆ ಬೆಳಗಿನ ಸಮಯ ಹಾಲು ಸೇವನೆ ಉತ್ತಮ. ಇಲ್ಲದಿದ್ದರೆ ರಾತ್ರಿ ಮಲಗುವ ಮುಂಚೆ ಸೇವಿಸಬಹುದು. ಆದರೆ ಯಾವುದೇ ಕಾರಣಕ್ಕೂ ಹಾಲಿನ ಮಿಲ್ಕ್ ಶೇಕ್ ಮಾಡಿ ಕುಡಿಯುವುದು ಉತ್ತಮವಲ್ಲ ಎಂಬುದು ಆಯುರ್ವೇದದ ನಂಬಿಕೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ