ಕ್ಯಾನ್ಸರ್ ನಿಂದ ತಪ್ಪಿಸಿಕೊಳ್ಳಬೇಕೆಂದರೆ ಏನು ಮಾಡಬೇಕು ಗೊತ್ತಾ?
ಭಾನುವಾರ, 20 ಆಗಸ್ಟ್ 2017 (09:01 IST)
ಬೆಂಗಳೂರು: ಇತ್ತೀಚೆಗೆ ವ್ಯಾಪಕವಾಗುತ್ತಿರುವ ಮಾರಣಾಂತಿಕ ಖಾಯಿಲೆಗಳಲ್ಲಿ ಕ್ಯಾನ್ಸರ್ ಕೂಡಾ ಒಂದು. ಅದನ್ನು ತಡೆಗಟ್ಟಲು ಹಲವು ದಾರಿಗಳಿವೆ.
ಅವುಗಳ ಪೈಕಿ ನಾವು ಸೇವಿಸುವ ಆಹಾರದಲ್ಲಿನ ಕಟ್ಟುನಿಟ್ಟು ಕೂಡಾ ಒಂದು. ಎಂತಹ ಆಹಾರ ಸೇವಿಸಿದರೆ ಕ್ಯಾನ್ಸರ್ ನಿಂದ ದೂರವಿರಬಹುದು ಎಂದು ತಿಳಿದುಕೊಳ್ಳೋಣ.
ತಜ್ಞರ ಪ್ರಕಾರ ವಿಟಮಿನ್ ಸಿ ಅಂಶ ಹೆಚ್ಚಿರುವ ಆಹಾರ ಸೇವನೆ, ವಿಟಮಿನ್ ಸಿ ಇಂಜೆಕ್ಷನ್ ತೆಗೆದುಕೊಳ್ಳುವುದರಿಂದ ಕ್ಯಾನ್ಸರ್ ದೂರ ಮಾಡಬಹುದು ಎನ್ನುತ್ತಾರೆ.
ವಿಟಮಿನ್ ಸಿ ಮೂಲದಿಂದ ನಮ್ಮ ದೇಹಕ್ಕೆ ಸಾಕಷ್ಟು ಅನುಕೂಲವಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಹಿಡಿದು, ಚರ್ಮ, ಕೂದಲುಗಳಿಗೂ ವಿಟಮಿನ್ ಸಿ ಅತ್ಯಗತ್ಯ. ಹಾಗಾಗಿ ಕಿತ್ತಳೆ, ಪಪ್ಪಾಯ, ನಿಂಬೆ ಹಣ್ಣು, ಬೆಟ್ಟದ ನೆಲ್ಲಿಕಾಯಿ, ಟೊಮೆಟೋ, ಸೀಬೆಕಾಯಿಯಂತಹ ಹಣ್ಣು, ಹಂಪಲುಗಳನ್ನು ಆದಷ್ಟು ಸೇವಿಸಿ. ಇವುಗಳಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದೆ.