ಮೊಸರಿನ ಜತೆ ಇವುಗಳನ್ನು ಸೇರಿಸಿ ತಿಂದರೆ ಏನಾಗುತ್ತದೆ ಗೊತ್ತಾ?

ಮಂಗಳವಾರ, 14 ಮಾರ್ಚ್ 2017 (09:50 IST)
ಬೆಂಗಳೂರು: ಊಟವಾದ ಮೇಲೆ ಒಂಚೂರು ಗಟ್ಟಿ ಮೊಸರು ಸವಿಯಲು ಎಲ್ಲರೂ ಇಷ್ಟಪಡುತ್ತಾರೆ. ಮೊಸರಿನ ಜತೆ ಈ ಕೆಲವು ಪದಾರ್ಥಗಳನ್ನು ಸೇರಿಸಿ ತಿಂದರೆ ಆರೋಗ್ಯದಲ್ಲಿ ಎಂತಹ ಬದಲಾವಣೆಯಾಗುತ್ತದೆ ಎಂದು ಮಾಡಿ ನೋಡಿ.

 
ಬೊಜ್ಜಿನ ಸಮಸ್ಯೆ ಇರುವವರು ಮೊಸರಿನೊಂದಿಗೆ ಸ್ವಲ್ಪ ಜೀರಿಗೆ ಪುಡಿ ಸೇರಿಸಿ ದಿನಾ ಸೇವಿಸುತ್ತಿದ್ದರೆ, ತೂಕ ಕಡಿಮೆಯಾಗಬಹುದು.  ಬ್ರೌನ್ ಉಪ್ಪಿನೊಂದಿಗೆ ಮೊಸರು ಸೇವಿಸಿದರೆ ಅಸಿಡಿಟಿಯಂತಹ ಜೀರ್ಣ ಸಂಬಂಧಿ ಸಮಸ್ಯೆಗಳು ಮಾಯ.

ಮೊಸರಿನ ಜತೆಗೆ ಸಕ್ಕರೆ ಸೇರಿಸಿಕೊಂಡು ನಾವೆಲ್ಲಾ ತಿನ್ನುತ್ತೇವೆ. ಇದರಿಂದ ಮೂತ್ರಕೋಶದ ಸಮಸ್ಯೆಗಳು ಪರಿಹಾರವಾಗುತ್ತದಂತೆ. ಮೊಸರಿನೊಂದಿಗೆ ಕರಿಮೆಣಸಿನ ಪುಡಿಯನ್ನು ಸೇರಿಸಿ ಕುಡಿದರೆ ಮಲಬದ್ಧತೆ ಸಮಸ್ಯೆ ಇರೋದಿಲ್ಲ.

ವಿವಿಧ ಹಣ್ಣಿನ ಜತೆಗೆ ಮೊಸರು ಸೇರಿಸಿ ಸಲಾಡ್ ರೂಪದಲ್ಲಿ ಸೇವಿಸಿದರೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅರಸಿನ ಪುಡಿ, ಶುಂಠಿ ಸೇರಿಸಿ ಮೊಸರು ಸೇವಿಸುವುದು ಗರ್ಭಿಣಿಯರಿಗೆ ಒಳ್ಳೆಯದು. ಮೊಸರಿಗೆ ಸ್ವಲ್ಪ ಜೇನು ತುಪ್ಪ ಸೇರಿಸಿ ಸೇವಿಸುವುದರಿಂದ ಹೊಟ್ಟೆ ಹುಣ್ಣು ಮಾಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ