ಮಕ್ಕಳ ಜೊತೆ ಲೈಂಗಿಕತೆಯ ಬಗ್ಗೆ ಯಾವಾಗ ಚರ್ಚಿಸಬೇಕು?

ಭಾನುವಾರ, 30 ಜೂನ್ 2019 (06:54 IST)
ಬೆಂಗಳೂರು : ನಾನು 35 ವರ್ಷದ ಮಹಿಳೆ. ನನಗೆ 7 ಮತ್ತು 9 ವರ್ಷದ ಇಬ್ಬರು ಗಂಡುಮಕ್ಕಳಿದ್ದಾರೆ. ಅವರೊಂದಿಗೆ ದೇಹ ಮತ್ತು ಲೈಂಗಿಕತೆಯ ಬಗ್ಗೆ ನಾನು ಯಾವಾಗ ಚರ್ಚಿಸಬೇಕು ಎಂಬ ಚಿಂತೆ. ಮಕ್ಕಳು ತಮ್ಮ ದೇಹದ ಬಗ್ಗೆ ತಿಳಿಯುವ ಕುತೂಹಲ ಹೊಂದಿದ್ದಾರೆ. ಖಾಸಗಿ ಭಾಗಗಳ ಬಗ್ಗೆ ಅವರಿಗೆ ತಿಳಿಸುವಾಗ ಅಡ್ಡಹೆಸರುಗಳನ್ನು ಬಳಸುವುದು ಸರಿಯೇ? ಶಿಶುಗಳು ಎಲ್ಲಿಂದ ಬರುತ್ತಾರೆ ಎಂದು ಅವರು ಕೇಳುವ ಪ್ರಶ್ನೆಗೆ ಏನೆಂದು ಉತ್ತರಿಸಲಿ. ದಯವಿಟ್ಟು ನನಗೆ ಸಹಾಯ ಮಾಡಿ.




ಮಕ್ಕಳಲ್ಲಿ ಅವರ ದೇಹದ ಬಗ್ಗೆ ತಿಳಿಯುವ ಕುತೂಹಲ ಬಾಲ್ಯದಲ್ಲಿಯೇ ಪ್ರಾರಂಭವಾಗಬಹುದು. ಅದಕ್ಕೆ ನೀವು ಬಳಸುವ ಪದಗಳ ಮೇಲೆ ಪ್ರಶ್ನೆಗಳು ಅಲಂಬಿಸಿರುತ್ತದೆ. ಅವರ ಪ್ರಶ್ನೆಗೆ ನೀವು ತುಂಬಾ ಕ್ಲೋಸ್ ಆಗಿ, ಆರಾಮವಾಗಿ ಉತ್ತರ ನೀಡುವುದಾದರೆ ನಿಜವಾದ ಪದಗಳನ್ನು ಬಳಸುವುದು ಉತ್ತಮ.


ಹಾಗೇ ಶಿಶುಗಳು ಎಲ್ಲಿಂದ ಬರುತ್ತಾರೆ ಎಂಬ ಅವರ ಪ್ರಶ್ನೆಗೆ ಮಮ್ಮಿ, ಡ್ಯಾಡಿ ಪರಸ್ಪರ ವಿಶೇಷ ರೀತಿಯಲ್ಲಿ ಪ್ರೀತಿದಾಗ ವಿಶೇಷ ಬೀಜವನ್ನು ನೆಡಲಾಗುತ್ತದೆ. ನಂತರ ಅದು ಮಗುವಾಗಿ ಬೆಳೆಯುತ್ತದೆ ಎಂದು ನೀವು ಮಕ್ಕಳಿಗೆ ವಿವರಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ