ತುಪ್ಪ ಬೇಕಾ ತುಪ್ಪ? ತುಪ್ಪ ತಿನ್ನೋದು ಯಾಕಪ್ಪಾ?!

ಬುಧವಾರ, 24 ಮೇ 2017 (10:08 IST)
ಬೆಂಗಳೂರು: ನಮ್ಮ ದೈನಂದಿನ ಆಹಾರದಲ್ಲಿ ತುಪ್ಪ ಬಳಸಿಯೇ ಬಳಸುತ್ತೇವೆ. ಇದು ಬೆಣ್ಣೆಗಿಂತಲೂ ಒಳ್ಳೆಯದಂತೆ. ಯಾಕೆ ಮತ್ತು ಹೇಗೆ ಎಂದು ತಿಳಿದುಕೊಳ್ಳಬೇಕಾರೆ ಈ ಸ್ಟೋರಿ ಓದಬೇಕು.

 
ಬೆಣ್ಣೆಗೆ ಹೋಲಿಸಿದರೆ ತುಪ್ಪದಲ್ಲಿ ಆರೋಗ್ಯಕರ ಕೊಬ್ಬಿನಂಶ ಜಾಸ್ತಿಯಿದೆಯಂತೆ. ಹಾಲಿನ ಪ್ರೊಟೀನ್ ಗಳನ್ನು ಬೇರ್ಪಡಿಸಿ ತುಪ್ಪ ತಯಾರಿಸುವುದರಿಂದ ತುಪ್ಪ ಆರೋಗ್ಯಕ್ಕೆ ಒಳ್ಳೆಯದು.

ತುಪ್ಪ ತಿನ್ನುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿರುವ ಕೊಬ್ಬಿನಂಶ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇತರ ಡೈರಿ ಉತ್ಪನ್ನಗಳನ್ನು ಸೇವಿಸಲಾಗದವರಿಗೂ ತುಪ್ಪ ಆರೋಗ್ಯಕ್ಕೆ ಒಳ್ಳೆಯದು.

ಹೆಚ್ಚನವರಲ್ಲಿ ತುಪ್ಪ ತಿಂದರೆ ದಪ್ಪಗಾಗುತ್ತೇವೆ ಎಂಬ ತಪ್ಪು ಕಲ್ಪನೆಯಿದೆ. ಆದರೆ ನಿಜಾವಾಗಿ ತುಪ್ಪದಲ್ಲಿ ತೂಕ ಕಡಿಮೆ ಮಾಡುವ ಗುಣವಿದೆ. ಹಠಮಾರಿ ಕೊಬ್ಬುಗಳನ್ನು ತುಪ್ಪ ನಾಶ ಮಾಡುತ್ತದೆ.

ಇದಲ್ಲದೆ, ಹೊಟ್ಟೆ ಉರಿ, ಮಲಬದ್ಧತೆಯಂತಹ ಸಮಸ್ಯೆಗಳಿಗೆ ತುಪ್ಪ ಪರಿಹಾರ ನೀಡುತ್ತದೆ. ಇದು ತಂಪು ಗುಣ ಹೊಂದಿದ್ದು, ಹೀಟ್ ಆಗಿ ಕಣ್ಣುರಿ ಬರುತ್ತಿದ್ದರೆ, ಇದನ್ನು ಸ್ವಲ್ಪ ತಲೆಗೆ ಹಚ್ಚಿಕೊಂಡು ಸ್ನಾನ ಮಾಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ