ಮಗಳು ಬೇಗನೇ ಮೈನೆರೆಯುವುದಕ್ಕೆ ಕಾರಣವೇನು ಗೊತ್ತಾ?

ಸೋಮವಾರ, 13 ಜುಲೈ 2020 (09:12 IST)
ಬೆಂಗಳೂರು: ಹೆಣ್ಣು ಮಕ್ಕಳಿಗೆ ವಯಸ್ಸು 11 ದಾಟಿದೆಯೆಂದರೆ ಅಮ್ಮಂದಿರಿಗೆ ಹೊಸ ತಲೆನೋವು ಶುರುವಾಗುತ್ತದೆ. ಮಗಳ ದೇಹದಲ್ಲಾಗುವ ಸಣ್ಣ ಪುಟ್ಟ ಬದಲಾವಣೆಯೂ ಆತಂಕವುಂಟು ಮಾಡುತ್ತದೆ.


ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಬೇಗನೇ ಋತುಬಂಧಕ್ಕೊಳಗಾಗುತ್ತಾರೆ. ಇದಕ್ಕೆ ಕಾರಣವೇನೆಂದರೆ ಇಂದಿನ ಜೀವನ ಶೈಲಿ, ಆಹಾರ ಶೈಲಿ.

ಹೆಚ್ಚು ಜಂಕ್ ಫುಡ್ ಗಳ ಸೇವನೆ ಮಾಡುತ್ತಿದ್ದರೆ, ಅಥವಾ ಅನಿಯಮಿತ ಆಹಾರ ಕ್ರಮವಿದ್ದರೆ ಬೇಗನೇ ಅವರಲ್ಲಿ ಹಾರ್ಮೋನ್ ಬದಲಾವಣೆಯಾಗುತ್ತದೆ. ಸಾಮಾನ್ಯವಾಗಿ ಹಾರ್ಮೋನ್ ಬದಲಾವಣೆ ಆರಂಭವಾಗುವುದು 11 ವರ್ಷ ವಯಸ್ಸಿನ ಬಳಿಕ.

ಆದರೆ ಹಿರಿಯ ತಲೆಮಾರಿನವರು ಬೇಗನೇ ಋತುಚಕ್ರ ಎದುರಿಸಿದ್ದ ಹಿನ್ನಲೆಯಿದ್ದರೆ ಅಥವಾ ಮೇಲೆ ಹೇಳಿದಂತೆ ಅನಿಯಮಿತ ಆಹಾರ ಕ್ರಮವಿದ್ದರೆ 9 ವರ್ಷದ ಬಳಿಕ ಹಾರ್ಮೋನ್ ನಲ್ಲಿ ಬದಲಾವಣೆಗಳಾಗುವ ಸಾಧ್ಯತೆಯಿರುತ್ತದೆ. ಇಂತಹ ಹುಡುಗಿಯರು ಬೇಗನೇ ಮುಟ್ಟು ಎದುರಿಸುತ್ತಾರೆ. ಆದರೆ ಇದಕ್ಕೆ ಗಾಬರಿಯಾಗುವುದು ಬೇಕಿಲ್ಲ. ಆದಷ್ಟು ಹೆಣ್ಣು ಮಕ್ಕಳಲ್ಲಿ ಇದರ ಬಗ್ಗೆ ಅರಿವು ಮೂಡಿಸುವುದು ಅಗತ್ಯ. ಆ ಸಮಯದಲ್ಲಿ ಸಣ್ಣ ಮಟ್ಟಿಗಿನ ಸ್ವಭಾವ ಬದಲಾವಣೆಗಳು ಆಗಬಹುದು. ಅದಕ್ಕೆ ತಲೆಕೆಡಿಸಿಕೊಳ್ಳಬೇಕಾದ್ದಿಲ್ಲ. ಅದು ಜೀವನದ ಒಂದು ಹಂತ ಎಂದು ತಿಳಿದುಕೊಂಡರೆ ಸಾಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ