ನಿಂತುಕೊಂಡು ನೀರು ಕುಡಿಯುವುದೂ ತಪ್ಪೇ?!

ಭಾನುವಾರ, 23 ಜುಲೈ 2017 (08:15 IST)
ಬೆಂಗಳೂರು: ನಮ್ಮ ಶರೀರದ ಬಹುಭಾಗ ನೀರಿನಂಶವಿದೆ. ನೀರು ನಮ್ಮ ಆರೋಗ್ಯಕ್ಕೆ ಎಲ್ಲಾ ರೀತಿಯಿಂದಲೂ ಒಳ್ಳೆಯದು. ಪ್ರತಿನಿತ್ಯ ಎರಡರಿಂದ ಮೂರು ಲೀಟರ್ ಕುಡಿಯಬೇಕಂತೆ. ಆದರೆ ಹೇಗೆ ಕುಡಿಯಬೇಕು?


ನಾವು ಹೆಚ್ಚಾಗಿ ನೀರು ಕುಡಿಯುವಾಗ ನಿಂತುಕೊಂಡೇ ಲೋಟ  ಅಥವಾ ಬಾಟಲಿಗಳಲ್ಲಿ ನೀರು ಕುಡಿಯುತ್ತೇವೆ. ಆದರೆ ಆಯುರ್ವೇದದ ಪ್ರಕಾರ ಆ ರೀತಿ ನೀರು ಕುಡಿಯುವುದು ತಪ್ಪಂತೆ!

ನಿಂತುಕೊಂಡು ನೀರು ಕುಡಿಯುವಾಗ ನಮ್ಮ ದೇಹದಲ್ಲಿರುವ ನರಗಳು ಆತಂಕ ಸ್ಥಿತಿಯಲ್ಲಿರುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ದೇಹ ಯಾವುದೋ ಅಪಾಯವನ್ನು ಎದುರಿಸಲು ಸನ್ನದ್ಧ ಸ್ಥಿತಿಯಲ್ಲಿರುತ್ತದೆ.ನಿಂತುಕೊಂಡು  ಅವಸರದಲ್ಲಿ ನೀರು ಕುಡಿಯುವುದರಿಂದ ವಾಯು ಮತ್ತು ಆಹಾರ ನಾಳಕ್ಕೆ ಸರಿಯಾಗಿ ಆಮ್ಲಜನಕ ಪೂರೈಕೆಯಾಗದು ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ಕೂತುಕೊಂಡು ಸಾವಕಾಶವಾಗಿ ನೀರು ಕುಡಿಯಬೇಕು.

ಇದನ್ನೂ ಓದಿ..  ಫೈನಲ್ ಗೂ ಮೊದಲು ಇಂಗ್ಲೆಂಡ್ ಎಚ್ಚರಿಕೆ ನೀಡಿದ ಮಿಥಾಲಿ ರಾಜ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ