ಹೊಟ್ಟೆ ಹಾಳು ಮಾಡುವ ಆಹಾರದ ಕಡೆಗೆ ಆಕರ್ಷಣೆ ಯಾಕಾಗುತ್ತದೆ?

ಮಂಗಳವಾರ, 16 ಮೇ 2017 (09:10 IST)
ಬೆಂಗಳೂರು: ಸಾಮಾನ್ಯವಾಗಿ ನಾವು ಇಷ್ಟಪಟ್ಟು ತಿನ್ನುವ ಆಹಾರಗಳು, ಆರೋಗ್ಯಕರವಾಗಿರುವುದಲ್ಲ. ಯಾಕೆ ನಮಗೆ ಅಂತಹ ಆಹಾರಗಳೇ ಇಷ್ಟವಾಗುತ್ತದೆ?

 
ನಮ್ಮ ಮೆದುಳು ಅಂತಹ ಆಹಾರದ ಕಡೆಗೇ ಸೆಳೆಯಲು ಹಲವು ಕಾರಣಗಳಿವೆ. ಮೊದಲನೆಯದಾಗಿ ಆಹಾರದ ರುಚಿ. ಅದು ಹೇಗೆ ನಮ್ಮ ನಾಲಿಗೆಗೆ ರುಚಿ ನೀಡುತ್ತದೆ, ಅದು ಯಾವ ರೀತಿಯ ವಾಸನೆ ಕೊಡುತ್ತದೆ ಎನ್ನುವುದಾಗಿದೆ.

ಇದನ್ನು ಓರೋಸೆನ್ಸೇಷನ್ ಎನ್ನುತ್ತೇವೆ. ಇದು ಜಂಕ್ ಫುಡ್ ಆಹಾರಗಳ ಕಡೆಗೆ ನಮ್ಮನ್ನು ಸೆಳೆಯುವ ಮುಖ್ಯ ಅಂಶವಾಗಿದೆ. ಹೆಚ್ಚಾಗಿ ಇಂತಹ ಆಹಾರಗಳು ನಮ್ಮ ಮೆದುಳಿಗೆ ಅದನ್ನು ಮತ್ತೆ ಮತ್ತೆ ತಿನ್ನುವಂತೆ ಸಂದೇಶ ನೀಡುತ್ತದೆ.

ಇನ್ನೊಂದು ಪ್ರಮುಖ ಅಂಶವೆಂದರೆ, ಆಹಾರಕ್ಕೆ ಸೇರಿಸಿರುವ ವಸ್ತುಗಳು. ಜಂಕ್ ಫುಡ್ ಗಳ ವಿಚಾರಕ್ಕೆ ಬಂದರೆ, ತಯಾರಕರು ಸಕ್ಕರೆ, ಉಪ್ಪು, ಖಾರವನ್ನು ಹೆಚ್ಚು ಮಿಕ್ಸ್ ಮಾಡಿರುತ್ತಾರೆ. ಇದು ನಮ್ಮನ್ನು ಮತ್ತೆ ಮತ್ತೆ ಆ ಆಹಾರ ತಿನ್ನುವಂತೆ ಮಾಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ