ಊಟದ ಬಳಿಕ ನಿದ್ರೆ ಬರುವುದು ಯಾಕೆ?

ಮಂಗಳವಾರ, 25 ಏಪ್ರಿಲ್ 2017 (08:08 IST)
ಬೆಂಗಳೂರು: ಮಧ್ಯಾಹ್ನ ಆಫೀಸ್ ನಲ್ಲೋ, ಕಾಲೇಜ್ ನಲ್ಲೋ ಊಟವಾದ ಬಳಿಕ ತೂಕಡಿಕೆ ಬರುತ್ತದಲ್ಲಾ ಎಂದು ಚಿಂತೆ ನಿಮಗಿರಬಹುದು. ಇದಕ್ಕೆ ಕಾರಣವೇನು ಗೊತ್ತಾ?

 
ತಜ್ಞರು ಇದಕ್ಕೆ ಉತ್ತರ ಹೇಳುತ್ತಾರೆ. ಊಟವಾದ ಬಳಿಕ ನಮಗೆ ನಿದ್ರೆ ಬರುವುದರ ಹಿಂದೆ ಬಲವಾದ ಕಾರಣವಿದೆ. ಮಧ್ಯಾಹ್ನ ಅಥವಾ ರಾತ್ರಿ ವೇಳೆ ನಾವು ಹೊಟ್ಟೆ ತುಂಬಾ ಹಸಿದಿದೆಯೆಂದು ಚೆನ್ನಾಗಿ ಉಣ್ಣುತ್ತೇವೆ.

ಅದು ಜೀರ್ಣವಾಗಲು ಸ್ವಲ್ಪ ಸಮಯ ಬೇಕು. ಜೀರ್ಣಕ್ರಿಯೆ ಸಂದರ್ಭದಲ್ಲಿ ಪ್ಯಾನ್ಕ್ರಿಯಾಸ್ ಗಳು ರಕ್ತದಲ್ಲಿ ಸಕ್ಕರೆ ಪ್ರಮಾಣ ಸರಿದೂಗಿಸಲು ಹೆಚ್ಚಿನ ಇನ್ಸುಲಿನ್ ಬಿಡುಗಡೆ ಮಾಡುತ್ತವೆ. ಹೆಚ್ಚು ಪ್ರಮಾಣದಲ್ಲಿ ಇನ್ಸುಲಿನ್ ಬಿಡುಗಡೆಯಾದಾಗ ನಮ್ಮ ದೇಹವು ಹೆಚ್ಚು ಸ್ಲೀಪ್ ಹಾರ್ಮೋನ್ ಗಳನ್ನು ಬಿಡುಗಡೆ ಮಾಡುತ್ತವೆ.

ಇದರಿಂದ ಸಹಜವಾಗಿಯೇ ನಮಗೆ ನಿದ್ರೆ ಬರುವ ಹಾಗಾಗುತ್ತದೆ. ಒಂಥರಾ ಸುಸ್ತಾದಂತೆ ಅನಿಸುವುದು ಸಹಜ ಎನ್ನುವುದು ತಜ್ಞರ ಅಭಿಪ್ರಾಯ. ಅದರಲ್ಲೂ ಅಧಿಕ ಕೊಬ್ಬಿನ ಅಂಶವಿರುವ ಆಹಾರ ಸೇವಿಸಿದರೆ, ಜೀರ್ಣಕ್ರಿಯೆ ಇನ್ನೂ ಕಷ್ಟ. ಇದರಿಂದಾಗಿ ನಮಗೆ ತೂಕಡಿಕೆ ಬರುತ್ತದೆ ಎನ್ನಲಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ