ಆಲೂಗಡ್ಡೆಯನ್ನು ಸರಿಯಾಗಿ ಬೇಯಿಸಿಯೇ ತಿನ್ನಬೇಕು ಯಾಕೆ ಗೊತ್ತಾ?
ಸೋಮವಾರ, 6 ಜುಲೈ 2020 (09:06 IST)
ಬೆಂಗಳೂರು: ಕೆಲವು ಆಹಾರ ವಸ್ತುಗಳನ್ನು ಹೆಚ್ಚು ಬೇಯಿಸುವುದರಿಂದ ಅದರಲ್ಲಿರುವ ಪೋಷಕಾಂಶ ನಷ್ಟವಾಗುತ್ತದೆ ಎಂದು ನಂಬಲಾಗಿದೆ. ಆದರೆ ಇನ್ನು ಕೆಲವು ಆಹಾರ ವಸ್ತುಗಳನ್ನು ಸರಿಯಾಗಿ ಬೇಯಿಸದೇ ಇದ್ದರೆ ಆರೋಗ್ಯ ಸಮಸ್ಯೆಯಾಗಬಹುದು.
ಅಂತಹವುಗಳಲ್ಲಿ ಆಲೂಗಡ್ಡೆಯೂ ಒಂದು. ಆಲೂಗಡ್ಡೆಯನ್ನು ಸರಿಯಾಗಿ ಬೇಯಿಸಿಯೇ ತಿನ್ನಬೇಕು. ಯಾಕೆಂದರೆ ಆಲೂಗಡ್ಡೆಯನ್ನು ತುಂಬಾ ಸಮಯ ಇಟ್ಟು ಬಳಿಕ ಬಳಸುವುದಾದರೆ ಅದರಲ್ಲಿ ಗ್ಲೈಕಾಲಾಯ್ಡ್ಸ್ ಎನ್ನುವ ವಿಷಕಾರಿ ಅಂಶ ಬೆಳವಣಿಗೆಯಾಗುತ್ತದೆ. ಹೀಗಾಗಿ ಇದನ್ನು ಸರಿಯಾಗಿ ಬೇಯಿಸದೇ ಸೇವಿಸಿದರೆ ಅಜೀರ್ಣದಂತಹ ಸಮಸ್ಯೆಗಳು ಬರಬಹುದು. ಹೀಗಾಗಿ ಆಲೂಗಡ್ಡೆಯನ್ನು ಮೆತ್ತಗೆ ಬೇಯಿಸಿಯೇ ಸೇವಿಸಬೇಕು.